ಉದ್ಯೋಗ ಖಾತ್ರಿ: ಮೊದಲ ಸ್ಥಾನದಲ್ಲಿ ಜಿಗ್ನೇಶ್‌ ಮೆವಾನಿ ಪ್ರತಿನಿಧಿಸುವ ವಡಗಾವ್‌!

ಗುಜರಾತ್‌ನ ದಲಿತ ಚಳುವಳಿಯ ನಾಯಕ, ಶಾಸಕ ಜಿಗ್ನೇಶ್ ಮೇವಾನಿ ಅವರ ವಿಧಾನಸಭಾ ಕ್ಷೇತ್ರವಾಗಿರುವ ಬನಸ್ಕಂತ ಜಿಲ್ಲೆಯ ವಡ‌ಗಾವ್‌‌‌ ತಾಲ್ಲೂಕು 2020-21ರ ಆರ್ಥಿಕ ವರ್ಷದಲ್ಲಿ ನರೇಗಾ ಅಡಿಯಲ್ಲಿ ಅತಿ ಹೆಚ್ಚು ಉದ್ಯೋಗ ನೀಡಿದ ಮನ್ನಣೆಗೆ ಪಾತ್ರವಾಗಿದೆ.

ಬನಸ್ಕಂತ ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಅಂಕಿಅಂಶಗಳ ಪ್ರಕಾರ, 2020-21ರಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ವಡ‌ಗಾವ್‌‌ನಲ್ಲಿ 7,893 ಮನೆಗಳ 12,531 ವ್ಯಕ್ತಿಗಳಿಗೆ ಉದ್ಯೋಗ ನೀಡಲಾಗಿದೆ.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 34,406 ವ್ಯಕ್ತಿಗಳು ಮತ್ತು 19,067 ಮನೆಗಳನ್ನು ನೋಂದಾಯಿಸಲಾಗಿದೆ. 19,067 ಮನೆಗಳಲ್ಲಿ 5,044 ಮನೆಗಳು ಎಸ್‌ಸಿ (ಪರಿಶಿಷ್ಟ ಜಾತಿ) ಸಮುದಾಯಗಳಿಗೆ ಸೇರಿದ್ದು, ಎಸ್‌ಟಿ (ಪರಿಶಿಷ್ಟ ಪಂಗಡ) ಸಮುದಾಯದ 700 ಮನೆಗಳು ಮತ್ತು 13,323 ಮನೆಗಳು ಇತರ ಸಮುದಾಯಗಳದ್ದಾಗಿದೆ ಎಂದು ದಾಖಲೆಯು ವಿವರಿಸಿದೆ.

ಉದ್ಯೋಗ ಖಾತ್ರಿಗೆ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಲು 63 ದಿನಗಳ ಅಭಿಯಾನವನ್ನು ತಮ್ಮ ತಂಡ ನಡೆಸಿದ್ದು, ಅದುವೆ ಈ ಸಾಧನೆ ಕಾರಣ ಎಂದು ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದ್ದಾರೆ.

“ನನ್ನ ತಂಡದ ಸದಸ್ಯರೊಂದಿಗೆ ಅಭಿಯಾನ ಸಮಯದಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಹಾಜರಿದ್ದೆ. ಅರ್ಹರು ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನಮೂನೆಗಳನ್ನು ಭರ್ತಿ ಮಾಡಿದ್ದೇನೆ. ಅಲ್ಲದೆ ನಮ್ಮ ತಂಡವು ಸಹಾಯವಾಣಿ ಸಂಖ್ಯೆಯನ್ನು ಸಹ ಪ್ರಾರಂಭಿಸಿ, ಜನರು ಕರೆ ಮಾಡಿ ತಮ್ಮನ್ನು ತಾವು ಯೋಜನೆಗೆ ನೋಂದಾಯಿಸಿ ಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು” ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಇದನ್ನೂ ಓದಿ: ವಿಡಿಯೋ: ಕ್ಯಾಮೆರಾ-ರೂಲ್‌-ಆಕ್ಷನ್‌; ಕಾಡಿನ ಬೆಂಕಿ ನಂದಿಸಲು ಅರಣ್ಯ ಸಚಿವರ ಅಸಾಮಾನ್ಯ ಪ್ರಯತ್ನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights