ಟೇಕಾಫ್‌ ಆಗುವ ಮುನ್ನವೇ ಕಳಚಿಬಿದ್ದ ವಿಮಾನದ ಎಮರ್ಜೆನ್ಸಿ ಡೋರ್‌!; ತಪ್ಪಿದ ಅನಾಹುತ

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನ ಟೇಕಾಫ್ ಆಗುವ ಮೊದಲೇ ವಿಮಾನದ ತುರ್ತು ನಿರ್ಗಮನ ದ್ವಾರ ಕಳಿಚಿಕೊಂಡು ಹಾರಿಹೋಗಿರುವ ಘಟನೆ ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ರನ್‌ವೇಯಿಂದ ಬಿದ್ದು ಹೋಗಿದ್ದ ತುರ್ತು ದ್ವಾರ ಎತ್ತಿ ತರಲಾಗಿದೆ. ಈ ಘಟನೆಯಿಂದ ಆ ಸಣ್ಣ ಬೊಟಿಕ್ ಏರ್ಲೈನ್ ​​ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಜೀವ ಭಯವನ್ನು ಅನುಭವಿಸಿದರೆಂದು ಗೊತ್ತಾಗಿದೆ.

ವರದಿಗಳ ಪ್ರಕಾರ ಘಟನೆಯ ನಂತರ ಆ ವಿಮಾನದ ಇಬ್ಬರು ಪೈಲಟ್‌ಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪ್ರಯಾಣ ಪ್ರಾರಂಭಿಸುವ ಮೊದಲು ಪೈಲಟ್‌ಗಳು ಪೂರ್ವ ಹಾರಾಟದ ಪರಿಶೀಲನಾಪಟ್ಟಿ ಪ್ರಕ್ರಿಯೆ ನಡೆಸಿರಲಿಲ್ಲ.

ಬಾಗಿಲು ಹಾರಿಹೋದಾಗ ವಿಮಾನವು ಗಂಟೆಗೆ 100ಮೈಲು ವೇಗಕ್ಕಿಂತಲೂ ಪ್ರಯಾಣಿಸುತ್ತಿತ್ತು ಎಂದು ಪ್ರಯಾಣಿಕ ಟಾಮ್ ಯೋನ್ ಅಂದಾಜು ಮಾಡಿದ್ದಾರೆ.

Read Also: ಇಸ್ರೇಲ್- ಹಮಾಸ್ ಹಿಂಸಾಚಾರ : ಗಾಜಾದಲ್ಲಿ 35, ಇಸ್ರೇಲ್‌ನಲ್ಲಿ 5 ಮಂದಿ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights