ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಆಕ್ಸಿಡೆಂಟ್ : ಚಾಲಕನಿಂದ ಇನ್ ಸೈಡ್ ಡಿಟೇಲ್ಸ್ ಲಭ್ಯ…!

ನಗರದಲ್ಲಿ ವೇಗವಾಗಿ ಚಲಿಸುವವರ ಎದೆಯಲ್ಲಿ ನಡುಕಹುಟ್ಟಿಸಿದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಆಕ್ಸಿಡೆಂಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಸೆಪ್ಟೆಂಬರ್ 14 ರಂದು ನಡೆದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಆಕ್ಸಿಡೆಂಟ್  ನ ಇನ್ ಸೈಡ್ ಡಿಟೇಲ್ಸ್ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಯನ್ನು ಪೊಲೀಸರು ಚಾಲಕ ನಿತೀಶ್ ಬಳಿ ಕಲೆ ಹಾಕಿದ್ದಾರೆ. ಚಾಲಕ ನಿತೀಶ್ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ.

“ನಾನು ಕ್ರಿಕೆಟ್ ಆಡಿ ಮನೆಗೆ ತೆರಳುತ್ತಿದ್ದೆ. ಈ ವೇಳೆ ಮನೆಗೆ ಬೇಗ ಹೋಗಲು ಕಾರನ್ನು ವೇಗವಾಗಿ ಚಲಾಯಿಸುತ್ತಿದೆ. ಆದರೆ ಕಾರು ಯಾವಾಗ ರಸ್ತೆ ಬದಿಗೆ ಹೋಯ್ತು ಅನ್ನೋದು ಗೊತ್ತಾಗುತ್ತಿಲ್ಲ. ನನಗೆ ನಿಯಂತ್ರಣ ತಪ್ಪಿದರ ಬಗ್ಗೆ ಅರಿವೇ ಇಲ್ಲ” ಎಂದು ನಿತೀಶ್ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್ 14 ರಂದು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಿತೀಶ್ ಚಲಾಯಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದ ಯುವಕ-ಯುವತಿಗೆ ಗುದ್ದಿ ರಸ್ತೆ ತಡೆ ಗೋಡೆಗೆ ಗುದ್ದಿ ಫ್ಲೈಓವ ರ್ಅಂಚಿನಲ್ಲಿ ನಿಂತುಕೊಂಡಿತ್ತು. ರಬಸವಾಗಿ ಕಾರು ಗುದ್ದಿದ ಪರಿಣಾಮ ಫ್ಲೈಓವರ್ ಮೇಲಿನಿಂದ ಯುವಕ ಯುವತಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯುವಕ ಪ್ರೀತಂ – ಯುವತಿ ಕೃತಿಕ ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿತ್ತು.

ಇವರಿಬ್ಬರ ಸಾವಿನ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ನಿತೀಶ್ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಕೊಂಚ ಚೇತರಿಸಿಕೊಂಡ ಬಳಿಕ ಆರೋಪಿ ನಿತೀಶ್ ನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ವಿಚಾರಣೆ ಸಮಯದಲ್ಲಿ ನಿತೀಶ್ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದು ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ನಿತೀಶ್ ಚೇತರಿಕೆ ಬಳಿಕ ಪೊಲೀಸರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ಕಾರು ಚಾಲಕ ನಿತೀಶ್ ನನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights