Election : ಕಾಂಗ್ರೆಸ್‌ಗೆ JDS ಹೊಸ ವರಸೆ, RS ಬದಲು ವಿಧಾನ ಪರಿಷತ್ ಸ್ಥಾನಕ್ಕಾಗಿ ಬೇಡಿಕೆ..

ಮೇಲ್ಮನೆ ಚುನಾವಣೆಯ ದಿನ ಅಂತಿಮವಾಗಿದೆ, ಮೂರು ಪಕ್ಷಗಳ ಹೋರಾಟಕ್ಕೆ ಅಖಾಡ ಸಿದ್ದವಾಗಿದೆ. ಆಡಳಿತ ಪಕ್ಷ ಬಿಜೆಪಿ ತನ್ನದೆ ಲೆಕ್ಕಾಚಾರದಲ್ಲಿ ನಡೆಯುತ್ತಿದೆ,  ಕಾಂಗ್ರೆಸ್‌ ರಾಜ್ಯಸಭೆಯಲ್ಲಿ ತನ್ನ ಭಲ ಹೆಚ್ಚಿಸಿಕೊಳ್ಳಲು ಚುನಾವಣಡಯನ್ನು ಗಂಭಿರವಾಗಿ ಪರಿಗಣಿಸಿದ್ದು, ಅದಕ್ಕಾಗಿ ತಂತ್ರ ರೂಪಿಸುತ್ತಿದೆ.  ಇದರ ಲಾಭ ಪಡೆಯಲು  ಜೆಡಿಎಸ್ ಹೊಸ ಆಫರ್ ಗಳನ್ನು ನೀಡುತ್ತಿದೆ..

ರಾಜ್ಯಸಭೆ ಸ್ಥಾನ ಬಿಟ್ಟುಕೊಡುತ್ತೆವೆ ಅದಕ್ಕಾಗಿ ನೀವು ನಮಗೆ  ವಿಧಾನ ಪರಿಷತ್ ಸ್ಥಾನವನ್ನು ಬಿಟ್ಟುಕೊಡಬೇಕು ಅನ್ನುವುದು ಜೆಡಿಎಸ್  ಪಕ್ಷದ ಹೊಸ ಆಫರ್..ಮೇಲ್ಮನೆ ಚುನಾವಣೆಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆಗೆ ಕಾಂಗ್ರೆಸ್ ಮುಂದೆ ಜಾತ್ಯತೀತ ಜನತಾ ದಳವು ಹೊಸ ಸೂತ್ರ ಮುಂದಿಟ್ಟಿದೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟು ಬದಲಿಗೆ ವಿಧಾನ ಪರಿಷತ್ತಿನಲ್ಲಿ ಒಂದು ಸ್ಥಾನಕ್ಕೆ ಬೆಂಬಲಿಸುವಂತೆ ಕಾಂಗ್ರೆಸ್ ಪಕ್ಷವು ಜೆಡಿಎಸ್‌ಗೆ ಪ್ರಸ್ತಾವ ನೀಡಿತ್ತು. ಆದರೆ ರಾಜ್ಯಸಭೆಗೆ ಹೋಗಲು ದೇವೇಗೌಡರು ಮನಸ್ಸು ಮಾಡಿದಂತಿಲ್ಲ. ಹೀಗಾಗಿ ರಾಜ್ಯಸಭೆಯ ಎರಡನೇ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಪಕ್ಷ ಮುಂದಾಗಿದೆ.

ಇದಕ್ಕೆ ಬದಲಾಗಿ ವಿಧಾನ ಪರಿಷತ್ತಿನಲ್ಲಿ ತನಗೆ ಒಂದು ಸ್ಥಾನಕ್ಕೆ ಬೆಂಬಲ ನೀಡುವಂತೆ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಮುಂದೆ ಹೊಸ ಸೂತ್ರ ಇಟ್ಟಿದೆ ಎಂದು ಹೇಳಲಾಗುತ್ತಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ತೆರವಾಗುವ ಸ್ಥಾನಗಳಿಗೆ ಚುನಾವಣೆ ಘೋಷಣೆ ಆಗಬೇಕಿದೆ. ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಸ್ಥಾನಗಳು ತೆರವಾಗಲಿವೆ.

ಈ ಮಧ್ಯೆ ಕಾಂಗ್ರೆಸ್ ಕೋಟಾದಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಅಗತ್ಯ ಸಂಖ್ಯಾಬಲ ಕಾಂಗ್ರೆಸ್ ಬಳಿ ಇಲ್ಲ. ಹೀಗಾಗಿ ಅದು ಜೆಡಿಎಸ್‌ ಬೆಂಬಲವನ್ನು ಅವಲಂಬಿಸಬೇಕಿದೆ.

ಮಾಜಿ ಪ್ರಧಾನಿ ದೇವೇಗೌಡರಿಗಾಗಿ ಒಂದು ರಾಜ್ಸಭಾ ಸ್ಣಾವನ್ನು ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿತ್ತು. ಆದರೆ ಈ ಪ್ರಸ್ತಾವಕ್ಕೆ ಗೌಡರು ಒಲವು ತೋರದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳು ನಡೆದಿವೆ.

ನೇರವಾಗಿ ಕಾಂಗ್ರೆಸ್ ಬೆಂಬಲದ ಮೇಲೆ ಮೇಲ್ಮನೆಗೆ ಹೋಗುವುದು ದೇವೇಗೌಡರಿಗೆ ಪಥ್ಯವಾಗಿಲ್ಲ. ಜೊತೆಗೆ ಇದರಿಂದ ಪಕ್ಷಕ್ಕೆ ರಾಜ್ಯದಲ್ಲಿ ಏನೂ ಪ್ರಯೋಜನ ಆಗದು ಎಂಬುದೂ ಅವರ ಅಭಿಪ್ರಾಯ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights