Economy : ತೀವ್ರ ಹಿನ್ನಡೆಯ ಭೀತಿಯಲ್ಲಿ ಭಾರತ ಎಂದ ಮೋದಿ ಮಾಜಿ ಸಲಹೆಗಾರ…

ಭಾರತದ ತೀವ್ರ ಆರ್ಥಿಕ ಹಿನ್ನಡೆಯ ಪರ್ವದಲ್ಲಿದ್ದು ಕ್ರಮೇಣ ಐಸಿಯುದತ್ತ ಸಾಗುತ್ತಿದೆ ಎಂದು ಮೋದಿ ಸರಕಾರದ ಮಾಜಿ ವಿತ್ತೀಯ ಸಲಹೆಗಾರ ಅರವಿಂದ ಸುಬ್ರಮಣಿಯನ್ ಎಚ್ಚರಿಸಿದ್ದಾರೆ.

ಭಾರತೀಯ ಬ್ಯಾಂಕುಗಳು ತೀರಾ ಅಪಾಯಕಾರಿ ಬಿಕ್ಕಟ್ಟು ಎದುರಿಸುತ್ತಿದ್ದು ಇದು ದೇಶವನ್ನು ಆರ್ಥಿಕ ಹಿನ್ನಡೆಯಿಂದ ಹೊರತರಲು ಅಡ್ಡಿಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೇ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.

ಭಾರತ ಈಗ ಅನುಭವಿಸುತ್ತಿರುವ ಹಿನ್ನಡೆ ಅಂತಿಂಥದ್ದಲ್ಲ. ಿದು ತೀವ್ರಸ ್ವರೂಪದ ಾರ್ಥಿಕ ಹಿಂಜರಿಕೆಯಾಗಿದ್ದು ನಿಧಾನವಾಗಿ ದೇಶ ಚೇತರಿಸಿಕೊಳ್ಳಲಾಗದೆ ಸ್ಥಿತಿಯತ್ತ ಸಾಗುತ್ತಿದೆ ಎಂದು ಈ ಹಿಂದೆ ಪ್ರಧಾನಿ ಅವರ ವಿತ್ತ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್ ಹೇಳಿದ್ದಾರೆ.

ಆರ್ಥಿಕ ಪ್ರಗತಿಗೆ ದ್ಯೋತಕವಾದ ಬಂಡವಾಳ ಹೂಡಿಕೆ ಮತ್ತು ರಫ್ತು ಪಾತಾಳ ತಲಿಪಿದೆ. ಅಲ್ಲದೇ ಈಗ ಬೇಡಿಕೆಯೂ ನೆಲಕಚ್ಚಿರುವುದರಿಂದ ಭಾರತದ ಆರ್ಥಿಕತೆ ಹಳ್ಳ ಹಿಡಿಯುವಂತಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights