Earthquake : ಕೊರೊನಾ ಹಾವಳಿ ನಡುವೆ ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ…!

ಜಗತ್ತಿನಾದ್ಯಂತ ಕೊರೊನಾ ಹಾವಳಿ ನಡುವೆ ಇಂಡೋನೇಷ್ಯಾದಲ್ಲಿ 6.6 ತೀವ್ರತೆಯ ಭೂಕಂಪನ ಸಂಭವಿಸಿದೆ.

ಹೌದು..  ಇಂಡೋನೇಷ್ಯಾದ ಜಾವಾ ದ್ವೀಪದ ಕರಾವಳಿಯಲ್ಲಿ ಮಂಗಳವಾರ (ಜುಲೈ 7) ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

500 ಕಿಲೋಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಯಾವುದೇ ಸಾವುನೋವು ಹಾನಿ ಸಂಭವಿಸಿಲ್ಲ.

2018 ರಲ್ಲಿ, ಸುಲಾವೆಸಿ ದ್ವೀಪದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿ ಸುನಾಮಿಯಿಂದ 4,300 ಕ್ಕೂ ಹೆಚ್ಚು ಜನರು ಬಲಿಯಾಗಿ ಕಾಣೆಯಾಗಿದ್ದರು.

2004 ರಲ್ಲಿ ಸುಮಾತ್ರಾ ಕರಾವಳಿಯಲ್ಲಿ 9.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಮಾತ್ರವಲ್ಲದೇ ಈ ವೇಳೆ ಸುನಾಮಿ ಸಂಭವಿಸಿ ಇಂಡೋನೇಷ್ಯಾದಲ್ಲಿ ಸುಮಾರು 170,000 ಸೇರಿದಂತೆ ಈ ಪ್ರದೇಶದಾದ್ಯಂತ 220,000 ಜನರು ಬಲಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights