ಎಮ್ಮೆಗಳಿಂದ ರೈತರ ಅಕ್ರಮ ಮದ್ಯ ಮಾರಾಟ ಬಯಲು : 100 ಕ್ಕೂ ಹೆಚ್ಚು ಮದ್ಯದ ಬಾಟಲಿ ವಶ..!

ಗುಜರಾತ್‌ನಲ್ಲಿ ಎಮ್ಮೆಗಳಿಂದ ಅಕ್ರಮ ಮದ್ಯ ಮಾರಾಟ ಬಯಲಾಗಿದ್ದು ಮೂವರು ರೈತರನ್ನು ಬಂಧಿಸಲಾಗಿದೆ.

ರೈತರು ಬಚ್ಚಿಟ್ಟಿದ್ದ ಮದ್ಯವನ್ನು ಎಮ್ಮೆಗಳು ಕುಡಿದ ಪರಿಣಾಮ ಅಕ್ರಮ ಮದ್ಯ ಮಾರಾಟ ಬಯಲಾಗಿದೆ. ಮದ್ಯೆ ಕುಡಿದ ಎಮ್ಮೆಗಳು ವಿಚಿತ್ರವಾಗಿ ವರ್ತಿಸಿ ನರಳಾಡಲು ಪ್ರಾರಂಭಿಸಿವೆ. ಹೀಗಾಗಿ ಆರೋಪಿಗಳಲ್ಲಿ ಒಬ್ಬರು ಪಶುವೈದ್ಯರನ್ನು ಕರೆದಿದ್ದಾರೆ. ವೈದ್ಯರು ಎಮ್ಮೆಗಳು ಕುಡಿಯುತ್ತಿದ್ದ ನೀರಿನ ತೊಟ್ಟಿಯನ್ನು ಪರಿಶೀಲಿಸಿ, ನೀರಿನ ಬಣ್ಣ ಬದಲಾಗಿದ್ದು ವಿಚಿತ್ರ ವಾಸನೆ ಬರುವುದನ್ನ ಗಮನಿಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಅಕ್ರಮ ಮದ್ಯದ ಬಾಟಲಿಗಳನ್ನು ಅಡಗಿಸಿಟ್ಟಿರುವುದು ಕಂಡು ಬಂದಿದೆ. ಇದರಲ್ಲಿ ಬಾಟಲಿ ಒಡೆದು ಎಮ್ಮೆಗಳು ಆ ನೀರನ್ನು ಕುಡಿದು ಈ ಅವಾಂತರ ಸೃಷ್ಟಿಯಾಗಿದೆ.

ಸೋಮವಾರ ಜಮೀನಿನ ಮೇಲೆ ದಾಳಿ ನಡೆಸಿ 32,000 ರೂ. ಮೌಲ್ಯದ 100 ಬಾಟಲಿಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು ಜೊತೆಗೆ ಪ್ರಕರಣದಲ್ಲಿ ಮೂವರು ರೈತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದಿಲಿಪ್ಸಿಂಹ್ ಬಾಲ್ದೇವ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಮದ್ಯ ತಯಾರಿಕೆ, ಖರೀದಿ, ಮಾರಾಟ ಅಥವಾ ಸಾಗಣೆ ನಿಷೇಧಿಸಲಾಗಿದೆ. ನಿಯಮ ಮೀರಿದರೆ ಭಾರಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights