ಕೊರೊನಾ ತಡೆಗೆ ಮತ್ತೆ ಲಾಕ್ ಡೌನ್ ಬಗ್ಗೆ ಡಾ. ಕೆ ಸುಧಾಕರ್ ಸುಳಿವು..!

ರಾಜ್ಯದಲ್ಲಿ ಕೊರೊನಾ ತಡೆಗೆ ಮತ್ತೆ ಲಾಕ್ ಡೌನ್ ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸುಳಿವು ಕೊಟ್ಟಿದ್ದಾರೆ.

ಹೌದು… ರಾಜ್ಯದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈಗಾಗಲೇ ಏಪ್ರಿಲ್ 20ರವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಮಾರುಕಟ್ಟೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನ ಕೊರೊನಾ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ” ನಾನಾಗಲಿ, ನಮ್ಮ ಸರ್ಕಾರವಾಗಲಿ ಲಾಕ್ ಡೌನ್ ಮಾಡುತ್ತೇವೆಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಆದರೆ ಜನರು ನಿರ್ಲಕ್ಷ್ಯ ತೋರಿದರೆ ಲಾಕ್ ಡೌನ್ ಮಾಡಬೇಕು. ಲಾಕ್ ಡೌನ್ ಮಾಡುವುದು ಬಿಡುವುದು ಜನರ ಕೈಯಲ್ಲಿದೆ. ಬೇಕಾಬಿಟ್ಟಿಯಿಂದ ಓಡಾಡುವುದು, ಕೊರೊನಾ ನಿಯಮ ಪಾಲಿಸದೇ ಇರುವುದು ಮಾಡಿದರೆ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ. ಒಂದು ವೇಳೆ ಲಾಕ್ ಡೌನ್ ಜಾರಿಗೊಳಿಸಬೇಕಾದ ಸಂದರ್ಭ ಬಂದರೆ ಇದಕ್ಕೆ ಜನರೇ ನೇರವಾಗಿ ಹೊಣೆ” ಎಂದು ಹೇಳಿದ್ದಾರೆ.

ನಮಗೆ ನೀವೆ ಕೊರೊನಾ ನಿರ್ಬಂಧ ಹಾಕಿಕೊಂಡರೆ ಲಾಕ್ ಡೌನ್ ಪ್ರಶ್ನೆ ಬರೋದಿಲ್ಲ. ಸರ್ಕಾರ ಕೈಮೀರಿ ಪೂರ್ವ ಯೋಜಿತವಾಗಿ ಕೊರೊನಾ ನಿಯಂತ್ರಣ ಮಾಡುತ್ತಿದೆ. ಆದರೆ ವರದಿ ಬಂದ ಮೇಲೆ ತೀರ್ಮಾನ ಮಾಡುತ್ತೇವೆ.

ಲಾಕ್ ಡೌನ್ ಮಾಡಲು ನಮಗೆ ಸರ್ಕಾರಕ್ಕೆ ಇಷ್ಟ ಇಲ್ಲ. ಆರ್ಥಿಕ ನಷ್ಟದ ಬಗ್ಗೆ ನಮಗೂ ಗೊತ್ತು. ಹೀಗಾಗಿ ಜನರು ಅಂತ ಸ್ಥಿತಿಗೆ ನಮ್ಮನ್ನು ತಂದೊಡ್ಡಬೇಡಿ ಎನ್ನುವುದು ನನ್ನ ಮನವಿ. ಜನ ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದರಿಂದಾಗಿ ನಾವು ಕೈಚೆಲ್ಲಿ ಕೂರುವಂತಾಗುವ ಸಂದರ್ಭ ಬರಬಹುದು ಎಂದಿದ್ದಾರೆ.

ಇದರ ಮಧ್ಯೆ ಇಂದು ತಜ್ಞರ ವರದಿ ಸರ್ಕಾರದ ಕೈ ಸೇರಲಿದೆ. ಈ ವರದಿ ಆಧಾರದ ಮೇಲೆ ಲಾಕ್ ಡೌನ್ ? ಸೆಮಿ ಲಾಕ್ ಡೌನ್? ಏರಿಯಾ ಗಳಿಗೆ ಸೀಮಿತವಾದ ಲಾಕ್ ಡೌನ್? ಫುಲ್ ಲಾಕ್ ಡೌನ್? ಕರ್ಫ್ಯೂ ಬಗ್ಗೆ ತೀರ್ಮಾನ ಮಾಡುವುದಾ ? ಎಂಬ ಬಗ್ಗೆ ಇವೆಲ್ಲವೂ ಗೊತ್ತಾಗುತ್ತದೆ ಎಂದು ಲಾಕ್ಡೌನ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ತಜ್ಞರ ವರದಿ ಬಳಿಕವಷ್ಟೇ ಲಾಕ್ ಡೌನ್ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights