ಕೈ ಕಾರ್ಯಕರ್ತನಿಗೆ ಡಿಕೆಶಿ ಥಳಿಸಿದ ಪ್ರಕರಣ : ‘ರೌಡಿ ಡಿಕೆಶಿ’ ಹ್ಯಾಷ್ ಟ್ಯಾಗ್ ಹಾಕಿ ಬಿಜೆಪಿ ಟ್ವೀಟ್!

ತಮ್ಮ ಪಕ್ಷದ ಕಾರ್ಯಕರ್ತನಿಗೆ ಥಳಿಸಿದ್ದ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಗರಂ ಆಗಿದೆ. ಬಿಜೆಪಿಗೆ ಡಿಕೆಶಿ ವಿರುದ್ಧ ಟೀಕೆ ಮಾಡಲು ಇದೊಂದು ಅಸ್ತ್ರ ಸಿಕ್ಕಂತಾಗಿದೆ. ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ಬಿಜೆಪಿ ಸರಣಿ ಪ್ರಶ್ನಗಳನ್ನು ಮಾಡಿದೆ.

ಕೈ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಥಳಿಸಿದ ಪ್ರಕರಣದ ವಿಡಿಯೋ ಹಂಚಿಕೊಂಡ ಬಿಜೆಪಿ ‘ರೌಡಿ ಡಿಕೆಶಿ’ ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದೆ. ನಿನ್ನೆ ಡಿಕೆ ಶಿವಕುಮಾರ್ ಮಂಡ್ಯದ ಕೆಎಂ ದೊಡ್ಡಗೆ ಭೇಟಿ ನೀಡಿದ್ಧ ವೇಳೆ ತಮ್ಮ ಹೆಗಲ ಮೇಲೆ ಕೈ ಹಾಕಲು ಬಂದ ಕೈ ಕಾರ್ಯಕರ್ತನಿಗೆ ಡಿಕೆ ಶಿವಕುಮಾರ್ ಥಳಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರಿಗೇ ಕೈ ಮಾಡಿದ ಡಿಕೆಶಿ ವಿರುದ್ಧ ಬಿಜೆಪಿ ಕೆಂಡಕಾರಿದೆ. ಈ ಘಟನೆಯ ವೀಡಿಯೋ ಟ್ವೀಟರ್ ನಲ್ಲಿ ಹಂಚಿಕೊಂಡ ಬಿಜೆಪಿ ‘ರೌಡಿ ಡಿಕೆಶಿ’ ಹ್ಯಾಷ್ ಟ್ಯಾಗ್ ಹಾಕಿದೆ. ಮಾತ್ರವಲ್ಲದೇ ಕೈ ಕಾರ್ಯಕರ್ತನಿಗೆ ಸಾರ್ವಜನಿಕವಾಗಿ ಥಳಿಸಿದ್ದ ಡಿಕೆಶಿಗೆ ಸರಣಿ ಪ್ರಶ್ನೆಗಳನ್ನು ಬಿಜೆಪಿ ಹಾಕಿದೆ.

ಈ ಘಟನೆ ಡಿಕೆ ಶಿವಕುಮಾರ್ ರೌಡಿ ಕೋತ್ವಾಲನೊಂದಿಗೆದ್ದ ಗತಕಾಲವನ್ನು ನೆನಪಿಸುತ್ತದೆ. ಡಿಕೆಶಿ ರಾಜಕಾರಣಿಯೋ ಅಥವಾ ರೌಡಿಯೋ ಎಂದು ಪ್ರಶ್ನಿಸಿದೆ. ಈ ರೀತಿ ನಡೆದುಕೊಂಡು ಹಳೆಯ ಜೀವನ ಡಿಕೆಶಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರ ನಡುವಳಿಕೆ ಹದ್ದು ಮೀರುತ್ತಿದೆ. ಇದು ಅಕ್ಷಮ್ಯ ಅಪರಾದ ಎಂದು ಟ್ವೀಟ್ ಮಾಡಿದೆ.

ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕೈ ಮಾಡಿದ್ದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ ಕೂಡ ಎರಡು ಮೂರು ಬಾರಿ ತಮ್ಮ ಬಳಿ ಬಂದು ಸೆಲ್ಫಿ ಫೋಟೋ ತೆಗೆದುಕೊಳ್ಳಿಸುವ ವ್ಯಕ್ತಿಗಳಿಗೆ ಥಳಿಸಿರುವುದುಂಟು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights