Bigg Boss : ‘ಕ್ಯಾಪ್ಟನ್ ದಿವ್ಯ ಮಂಜು ಫೇವರ್’ – ಕಣ್ಣೀರಿಟ್ಟ ಪ್ರಶಾಂತ್!

ದಿವ್ಯ ಉರುಡುಗ ಬಿಗ್ ಬಾಸ್ ಮನೆಯ ಮೊದಲ ಮಹಿಳಾ ಕ್ಯಾಪ್ಟನ್. ಆದರೆ ಅವರ ಕ್ಯಾಪ್ಟನ್ಸಿ ಬಗ್ಗೆ ಪ್ರಶಾಂತ್ ಸಂಬರಗಿ ಫೇವರಿಸಂ ಎನ್ನುವ ಪಟ್ಟ ಕಟ್ಟಿದ್ದಾರೆ.

ಹೌದು.. ದಿವ್ಯ ಉರುಡುಗ ಹಾಗೂ ಅರವಿಂದ್ ಆರಂಭದಿಂದಲೂ ಗುಡ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ದಿವ್ಯ ಅವರು ಯಾವಾಗಲೂ ಅರವಿಂದ್ ಅವರ ಫೇವರ್ ಆಗಿನೇ ಆಟ ಆಡುತ್ತಾರೆನ್ನುವುದು ಮನೆಯ ಕೆಲ ಸದಸ್ಯರ ಅನಿಸಿಕೆ. ಆದ್ರಲ್ಲೂ ದಿವ್ಯ ಕ್ಯಾಪ್ಟನ್ ಆದಾಗಿನಿಂದಲೂ ಫೇವರ್ ಆಟ ಆಡುತ್ತಿರುವುದನ್ನ ಪ್ರಶಾಂತ್ ಒತ್ತಿ ಹೇಳುತ್ತಿದ್ದಾರೆ.

ನಿನ್ನೆ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಕ್ಯಾಪ್ಟನ್ ದಿವ್ಯ ಮಂಜು ಫೇವರ್ ಆಗಿದ್ರು ಎನ್ನುವ ಮಾತನ್ನ ಪ್ರಶಾಂತ್ ಪದೇ ಪದೇ ಹೇಳಿದ್ದಾರೆ. ಟಾಸ್ಕ್ ನಲ್ಲಿ ತಮಗೆ ಮೋಸ ಆಗಿದೆ ಎಂದು ಪ್ರಶಾಂತ್ ಕಣ್ಣೀರಾಕಿದ್ದಾರೆ.

ಟಾಸ್ಕ್ ನಲ್ಲಿ ಎಪ್ರಾನ್ ಧರಿಸುವ ಮೊದಲ ಐದು ಸದಸ್ಯರು ನೋಟು ಮುದ್ರಿಸಬಹುದು. ಬಸರ್ ಆದ ಬಳಿಕ ಮೊದಲು ಎಪ್ರಾನ್  ಧರಿಸುವ ಐದು ಸದಸ್ಯರು ನೋಟು ಮುದ್ರಿಸಬಹುದು. ಈ ಆಟದಲ್ಲಿ ಪ್ರಶಾಂತ್ ಅವರು ಮೊದಲು ಎಪ್ರಾನ್ ಹಿಡಿದುಕೊಂಡಿದ್ದರು. ಈ ವೇಳೆ ಮಂಜು ಪ್ರಶಾಂತ್ ಹಿಡಿದ ಎಪ್ರಾನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಕತ್ತಿಗೆ ಹಾಕಿಕೊಳ್ಳಲೂ ಪ್ರಯತ್ನಿಸಿದ್ದಾರೆ. ಆದರೆ ಕ್ಯಾಪ್ಟನ್ ದಿವ್ಯ ಮಧ್ಯೆ ಪ್ರವೇಶಿಸಿ ಮಂಜು ಎಪ್ರಾನ್ ಕತ್ತಿಗೆ ಹಾಕಿಕೊಂಡಿರುವುದನ್ನ ನಾನು ನೋಡಿದೆ ಎಂದು ಮಂಜುಗೇ ನೋಟು ಮುದ್ರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಬೇಸತ್ತ ಪ್ರಶಾಂತ್ ಕಣ್ಣೀರಾಕಿದ್ದಾರೆ.

ಎಪ್ರಾನ್ ಮಂಜು ಹಾಕಿಕೊಂಡಿದ್ದನ್ನು ನಾನು ನೋಡಿದೆ ಎಂದು ದಿವ್ಯ ಸತ್ಯದ ಮೇಲೆ ಹೊಡೆದಂತೆ ಹೇಳಿದ್ದಾರೆ. ಹೀಗಾಗಿ ಪ್ರಶಾಂತ್ ಅವರಿಗೆ ತುಂಬಾ ಬೇಸರವಾಗಿ ಅತ್ತಿದ್ದಾರೆ. ನೇರವಾಗಿ ದಿವ್ಯರಿಗೆ ಫೇವರಿಸಂ ಮಾಡಿದ್ದೀರೆಂದು ಹೇಳಿದ್ದಾರೆ.

ಕೊಂಚ ಸಮಯದ ಬಳಿಕ ಮಂಜು ಕೂಡ ಪ್ರಶಾಂತ್ ಮುಂದೆ ತಾವು ಕತ್ತಿಗೆ ಎಪ್ರಾನ್ ಹಾಕಿಕೊಂಡಿರಲಿಲ್ಲ ಎನ್ನುವ ಮಾತನ್ನು ಒಪ್ಪಿಕೊಂಡಿದ್ದಾರೆ. ಮಂಜುನೇ ಕತ್ತಿಗೆ ಎಪ್ರಾನ್ ಹಾಕಿಕೊಂಡಿರಲಿಲ್ಲ ಎಂದು ಒಪ್ಪಿಕೊಳ್ಳುವಾಗ ಕ್ಯಾಪ್ಟನ್ ದಿವ್ಯಾರಿಗೆ ಮಂಜು ಎಪ್ರಾನ್ ಕತ್ತಿಗೆ ಹಾಕಿಕೊಂಡಿದ್ದು ಕಾಣಿಸಲು ಹೇಗೆ ಸಾಧ್ಯ..? ಇದಕ್ಕೆ ಬಿಗ್ ಬಾಸೇ ಉತ್ತರ ನೀಡಬೇಕು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights