ಮಹಿಳೆಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾ; ಅಧಿಕಾರಿಗೆ 25,000 ದಂಡ ವಿಧಿಸಿದ ಹೈಕೋರ್ಟ್‌!

ಕರ್ನಾಟಕ ಪೌರಾಢಳಿತ ನಿರ್ದೇಶನಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ರಜೆ ನೀಡದೆ, ಸೇವೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌, ನಿರ್ದೇಶನಾಯದ ಅಧಿಕಾರಿಗೆ 25,000 ದಂಡ ವಿಧಿಸಿದ್ದು, ಮಹಿಳೆಗೆ ಉದ್ಯೋಗವನ್ನು ಮರಳಿ ನೀಡುವಂತೆ ಆದೇಶಿಸಿದೆ.

ಬೆಂಗಳೂರಿನ ನಿವಾಸಿಯಾದ ಬಿಎಸ್‌ ರಾಜೇಶ್ವರಿ ಎಂಬುವವರು ಪೌರಾಢಳಿತ ನಿರ್ದೇಶನಾಯಲದ ತಾಂತ್ರಿಕ ವಿಭಾಗದಲ್ಲಿ ಗುತ್ತಿಗೆ ಆಧಾರದ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಹೆರಿಗೆಗಾಗಿ ತೆರಳಲು ಅವರು ಹೆರಿಗೆ ರಜೆಗಾಗಿ 2019ರ ಜೂ.11 ಅರ್ಜಿ ಸಲ್ಲಿಸಿದ್ದರು. ಅದರೆ, ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದ್ದು, ಅಕೆಯನ್ನು 2019ರ ಆ.29 ರಂದು ಉದ್ಯೋಗದಿಂದ ವಜಾಗೊಳಿಸಿದ್ದರು.

ತಮ್ಮನ್ನು ಉದ್ಯೋಗದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿದ್ದ ಮಹಿಳೆ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಮಹಿಳೆಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಅದೇಶವನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಅಧಿಕಾರಿಗೆ 25 ಸಾವಿರ ದಂಡ ವಿಧಿಸಿದ್ದು, ಮಹಿಳೆಗೆ ಇನ್ನೆರಡು ವಾರಗಳಲ್ಲಿ ಉದ್ಯೋಗ ಮರಳಿಸುವಂತೆ ಆದೇಶಿಸಿದ್ದಾರೆ.

ಅರ್ಜಿದಾರರ ಅಳಲನ್ನು ಆಲಿಸಿದ ನ್ಯಾಯಮೂರ್ತಿಗಳು, ಹೆರಿಗೆ ರಜೆ ನೀಡುವ ಮೂಲಕ ಆಕೆಯ ಹಕ್ಕನ್ನು ಸರ್ಕಾರ ರಕ್ಷಿಸಬೇಕು. ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆಗೆ ಹೆರಿಗೆ ರಜೆ ನೀಡಿಲ್ಲ ಮತ್ತು ಅಲ್ಲದೆ ಸೇವೆಯಿಂದ ವಜಾಗೊಳಿಸಲಾಗಿದೆ. ಆ ಮೂಲಕ ಆಕೆಗೆ ಸಂವಿಧಾನದತ್ತವಾಗಿ ದೊರೆತ ಹಕ್ಕು ಮತ್ತು ಮಾನವ ಹಕ್ಕಗಳ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ,  ಸೇವೆಯಿಂದ ವಜಾಗೊಳಿಸಿದ ದಿನದಿಂದ ಮರು ನಿಯೋಜನೆ ಮಾಡುವ ದಿನದವರೆಗೂ ಶೇ.50ರಷ್ಟು ಹಿಂಬಾಕಿ ಪಾವತಿಸಬೇಕು. ಸೇವೆಯಿಂದ ವಜಾಗೊಳಿಸಿ ತೊಂದರೆ ನೀಡಿದ ಕಾರಣಕ್ಕೆ ಅರ್ಜಿದಾರ ಮಹಿಳೆಗೆ 25 ಸಾವಿರ ರೂ. ಪಾವತಿಸಬೇಕು. ಆ ಹಣವನ್ನು ಆದೇಶ ಹೊರಡಿಸಿದ ಅಧಿಕಾರಿಯಿಂದಲೇ ವಸೂಲಿ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ಟಿಎಂಸಿ ಸಂಸದರ ಮಾನನಷ್ಟ ಮೊಕದಮೆ; ಗೃಹ ಸಚಿವರಿಗೆ ಸಮನ್ಸ್‌ ನೀಡಿದ ಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights