ಇಬ್ಬರ ಸ್ವಾರ್ಥಕ್ಕಾಗಿ ಧರಂಸಿಂಗ್ ಸರ್ಕಾರ ಉರುಳಿತು: ವಾಟಾಳ್ ನಾಗರಾಜ್

ಇಬ್ಬರು ನಾಯಕರ ಸ್ವಾರ್ಥಕ್ಕಾಗಿ ಧರಂಸಿಂಗ್ ನೇತೃತ್ವದ ಸರ್ಕಾರವನ್ನು ಉರುಳಿತು. ಆ ಮೂಲಕ ಆ ಇಬ್ಬರು ನಾಯಕರು ರಾಜ್ಯ ರಾಜಕಾರಣಕ್ಕೆ ಬರಬಾರದ ರೋಗ ತಂದಿಟ್ಟರು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಅವರು ಕರ್ನಾಟಕದ ರಾಜಕೀಯ ಕುರಿತು ಬರೆದ ‘ರಾಜ ಚರಿತೆ’ ಪುಸ್ತಕವನ್ನು ಬಿಡುಗಡೆ ಮಾಡಿಮಾತನಾಡಿದ ಅವರು,‌

ಒಂದು ವೇಳೆ ಧರಂಸಿಂಗ್ ಅವರು ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೆ, ಅವರ ಸರ್ಕಾರವನ್ನು ಉರುಳಿಸಲು ಸಾಧ್ಯವಿತ್ತೇ? ಸಿಂಗ್‌ ಅವರು ದುರ್ಬಲ ಸಮುದಾಯಕ್ಕೆ ಸೇರಿದ್ದವರಾದ್ದರಿಂದ ಅವರ ಸರ್ಕಾರವನ್ನು ಈ ಇಬ್ಬರು ನಾಯಕರು ಪಿತೂರಿ ನಡೆಸಿ ಸರ್ಕಾರವನ್ನು ನಿರಾಯಾಸವಾಗಿ ಉರುಳಿಸಿದರು ಎಂದು ಆರೋಪಿಸಿದ್ದಾರೆ.

ಕೆಂಗಲ್‌ ಹನುಮಂತಯ್ಯ ಅವರದ್ದು ಹಲವು ಮಹಾನುಭಾವರಿದ್ದ ಸತ್ಯಹರಿಶ್ಚಂದ್ರನ ಸಂಪುಟ. ಇನ್ನು ಮುಂದೆ ಕನಸಿನಲ್ಲೂ ಅಂತಹ ಸಂಪುಟವನ್ನು ನೋಡಲು ಸಾಧ್ಯವಿಲ್ಲ. ಕೆಂಗಲ್‌ ಅವರ ಸಂಪುಟದಲ್ಲಿದ್ದ ಸಿದ್ಧಲಿಂಗಯ್ಯ ಅವರು ತಮ್ಮ ಕುಟುಂಬದವರೊಬ್ಬರ ವಿರುದ್ಧ ಆರೋಪ ಬಂದಾಗ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಈಗಿನ ಆಡಳಿತಗಾರರ ಬಾಯಿ ದೊಡ್ಡದು. ಹಡಗನ್ನೇ ಸುಲಭವಾಗಿ ನುಂಗಿ ಜೀರ್ಣಿಸಿಕೊಳ್ಳುತ್ತಾರೆಎಂದು ಅವರು ಟೀಕಿಸಿದ್ದಾರೆ.

ಈಗಿನ ರಾಜಕಾರಣ ತಲುಪಿರುವ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಒಂದು ಕಾಲದಲ್ಲಿ ಅಡುಗೆ ಅನಿಲಕ್ಕೆ ಎರಡು ರೂಪಾಯಿ ಹೆಚ್ಚಳವಾದರೆ ರಾಜಕೀಯ ಪಕ್ಷಗಳು ಬೀದಿಗಿಳಿಯುತ್ತಿದ್ದವು. ಆದರೆ ಈಗ ಇಪ್ಪತ್ತೈದು ರೂಪಾಯಿ ಜಾಸ್ತಿಯಾದರೆ ಜನರೂ ಮಾತನಾಡುವುದಿಲ್ಲ. ವಿರೋಧ ಪಕ್ಷಗಳಿಗೂ ಅದರ ವಿರುದ್ಧ ಹೋರಾಡುವ ಕೆಚ್ಚಿಲ್ಲ ಎಂದು ವಾಟಾಳ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights