ಅಸಂಘಟಿತ ವಲಯವನ್ನು ನಾಶಮಾಡಿ; ಜನರನ್ನು ಗುಲಾಮರನ್ನಾಗಿಸುತ್ತಿದೆ ಮೋದಿ ಸರ್ಕಾರ: ರಾಹುಲ್‌ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಜಿಡಿಪಿಯು ಮೊದಲ ಬಾರಿಗೆ ಐತಿಹಾಸಿಕ ಇಳಿಕೆ ಕಂಡಿದೆ. ದೇಶದ ಜಿಡಿಸಿ ಕಳೆದ ಮೂರು ತಿಂಗಳಲ್ಲಿ ಶೇ.23.9 ರಷ್ಟು ಕುಸಿತ ಕಂಡಿದ್ದು, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 6 ವರ್ಷಗಳಿಂದ ಅಸಂಘಟಿತ ವಲಯವನ್ನು ಕೇಂದ್ರ ಸರ್ಕಾರ ನಾಶಪಡಿಸುತ್ತಿದೆ. ನೋಟು ನಿಷೇಧ, ಜಿಎಸ್‌ಟಿ, ಲಾಕ್ಡೌನ್ ನಿಂದಾಗಿ ಈ ವಲಯಗಳನ್ನು ಕೇಂದ್ರ ಸರ್ಕಾರ ನಾಸಪಡಿಸಿದ್ದು, ಜನರನ್ನು ಗುಲಾಮರನ್ನಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಇದು ಅತ್ಯಂತ ಕೆಟ್ಟದಾದ ಆರ್ಥಿಕ ಕುಸಿತವಾಗಿದೆ.

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್‌ಎಸ್‌ಒ ಅಂಕಿ ಅಂಶ ಹೇಳಿದೆ.

2019–2020 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 5.2% ದಾಖಲಾಗಿತ್ತು. 2ನೇ ತ್ರೈಮಾಸಿಕದಲ್ಲಿ 4.4 % ದಾಖಲಾದರೆ, 3ನೇ ತ್ರೈಮಾಸಿಕದಲ್ಲಿ 4.1% ದಾಖಲಾಗಿ, 4ನೇ ತ್ರೈಮಾಸಿಕದ ಹೊತ್ತಿಗೆ 3.1% ಬೆಳವಣಿಗೆ ದಾಖಲಾಗಿತ್ತು.

ಆದರೆ 2020–21 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲೇ -23.9% ದಷ್ಟು ಇಳಿಯಾಗಿದೆ. ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ.

ದೇಶದಲ್ಲಿ ಕೊರೊನಾ ಪ್ರಾರಂಭವಾಗುವುದಕ್ಕೆ ಮುಂಚೆ, ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆ ಮತ್ತು ಕಡಿಮೆ ಬೇಡಿಕೆಯ ಹೊರತಾಗಿಯೂ, ಆರ್ಥಿಕತೆಯನ್ನು ಅಂದಾಜು 2.8 ಟ್ರಿಲಿಯನ್ ಡಾಲರ್‌‌ನಿಂದ, 2024 ರವೇಳೆಗೆ 5 ಟ್ರಿಲಿಯನ್‌ ಡಾಲರ್‌ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿತ್ತು.


ಇದನ್ನೂ ಓದಿ: ಮೂರು ತಿಂಗಳಲ್ಲಿ GDP ಶೇ.23.9 ಕುಸಿತ; ಗರಿಷ್ಟ ಇಳಿಕೆ ಕಂಡ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights