ಚುನಾವಣೆಯಲ್ಲಿ ಹೀನಾಯ ಸೋಲು; ಕಮಲ್‌ ಹಾಸನ್‌ ಪಕ್ಷಕ್ಕೆ ಸರಣಿ ರಾಜೀನಾಮೆ!

ಸ್ಟಾರ್‌ ನಟ ಕಮಲ್ ಹಾಸನ್ ಅವರ ಮಕ್ಕಳ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷ ತಮಿಳುನಾಡಿನ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಪಕ್ಷದ ಹಲವಾರು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.

ಪಕ್ಷದ ಉಪಾಧ್ಯಕ್ಷ ಆರ್ ಮಹೇಂದ್ರನ್ ಕೂಡ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಇದು ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಕಮಲ್ ಹಾಸನ್‌ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಮಹೇಂದ್ರನ್‌ ಮಾತ್ರವಲ್ಲದೆ, ಈಗಾಗಲೇ ಪಕ್ಷದ ಮುಖಂಡರಾದ ಮುರುಗಾನಂದಮ್, ಮೌರ್ಯ, ತಂಗವೇಲು, ಉಮಾದೇವಿ, ಸಿಕೆ ಕುಮಾರವೇಲ್, ಶೇಕರ್ ಮತ್ತು ಸುರೇಶ್ ಅಯ್ಯರ್ ರಾಜೀನಾಮೆ ನೀಡಿದ್ದಾರೆ.

ಹೀಗಾಗಿ ಪಕ್ಷ ತೊರೆದವರು ‘ದ್ರೋಹಿ’ಗಳು ಎಂದು ಕಮಲ್‌ ಆಕ್ರೋಶ ವ್ಯಕ್ತಪಡಿಸಿದ್ದು, ಮಹೇಂದ್ರನ್ ಅವರು ರಾಜೀನಾಮೆ ನೀಡದಿದ್ದರೂ ನಾವೇ ಅವರನ್ನು ಪಕ್ಷದಿಂದ ವಜಾಗೊಳಿಸುತ್ತಿದ್ದೆವು. ಅವರು ಪಕ್ಷಕ್ಕೆ ‘ಮುಳ್ಳಿನ ಗಿಡ’ವಿದ್ದಂತೆ, ಆ ಗಿಡ ತೊಲಗಿದೆ ಎಂದು ಅವರು ಹೇಳಿದ್ದಾರೆ.

ಹೇಡಿಗಳು ಪಕ್ಷ ತೊರೆಯುವ ಬಗ್ಗೆ ನಾವು ಯೋಚಿಸುವುದಿಲ್ಲ, ಕೆಲವರ ರಾಜೀನಾಮೆಯಿಂದ ಪಕ್ಷದ ಗುರಿಮಾತ್ರ ಬದಲಾಗುವುದಿಲ್ಲ ಎಂದು ಕಮಲ್‌ಹಾಸನ್‌ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುತ್ತಿದೆ ಮೋದಿ ಸರ್ಕಾರ; ಇದನ್ನು ಸಹಿಸಬಹುದೇ?: ಹೆಚ್‌ಡಿಕೆ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights