ರಾಜಾದ್ಯಂತ ಇವತ್ತಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ – ಸಿಎಂ ಘೋಷಣೆ

ವಿದೇಶದಿಂದ ಎರಡನೇ ಕೊರೊನಾ ಅಲೆ ಪಸರಿಸುವ ಸಾಧ್ಯತೆ ದಟ್ಟವಾಗಿದ್ದು ಇಂದಿನಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ನೈಟ್ ಕರ್ಫ್ಯೂ ವೇಳೆ ಸಂಚಾರ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಕೂಡ ಇದೆ. ಮೊದಲೇ ಸಂಕರ್ಷದಲ್ಲಿರುವ ರಾಜ್ಯದ ಜನತೆಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೆರೆಡು ದಿನದಲ್ಲಿ ಕ್ರಿಸ್ ಮಸ್ ನಂತರ ಹೊಸ ವರ್ಷ ಆಚರಣೆಗಳು ನಡೆಯುತ್ತವೆ. ಜನ ಸಮೂಹವೇ ಸೇರಿಕೊಂಡು ಆಚರಿಸುವ ಈ 2 ಹಬ್ಬಗಳ ಆಚರಣೆಗೆ ಸಧ್ಯ ಕಡಿವಾಣ ಬಿದ್ದಂತಾಗಿದೆ.

ಹೀಗಾಗಿ ಬಾರ್ ರೆಸ್ಟೋರೆಂಟ್, ಪಬ್, ಕ್ಲಬ್ ಗಳ ಮಾಲೀಕರು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿದೇಶಿ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಶಾಲೆಗಳು ಜನವರಿಯಿಂದ ಆರಂಭವಾಗುತ್ತವೆ. ಆದರೆ ಇಂದು ನೈಟ್ ಕರ್ಫ್ಯೂ ಜಾರಿಗೊಳ್ಳಲಿದ್ದು, ಜನವರಿ 2ರ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ 10 ದಿನಗಳ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಮಧ್ಯೆ ಮಾರಾಟಕ್ಕೆ ಭಾರಿ ಹೊಡೆತೆ ಬೀಳುವ ಸಾಧ್ಯತೆ ಇದ್ದು ಆದರೆ ಸಮಾಜಕ್ಕಾಗುವ ನಷ್ಟ ತಪ್ಪಿಸಲು ಈ ನಿರ್ಧಾರ ಅವಶ್ಯಕ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights