ತಮಿಳುನಾಡು: ಫ್ರೀಜರ್ ಬಾಕ್ಸ್‌ನಲ್ಲಿ ಇಟ್ಟಿದ್ದ ಮೃತ ವ್ಯಕ್ತಿ ಜೀವಂತ- ಸಂಬಂಧಿಕರ ವಿರುದ್ಧ ಕೇಸ್!

74 ವರ್ಷದ ವ್ಯಕ್ತಿಯೊಬ್ಬನ ಮೃತ ದೇಹವನ್ನು ರಾತ್ರಿಯಿಡೀ ಫ್ರೀಜರ್ ಪೆಟ್ಟಿಗೆಯೊಳಗೆ ಇಡಲಾಗಿದ್ದು ಮರುದಿನ ಆತ ಜೀವಂತವಾಗಿರುವುದು ಕಂಡುಬಂದ ವಿಲಕ್ಷಣ ಘಟನೆ ನಡೆದಿದೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಕಂಧಂಪತ್ತಿಯ ಬಾಲಸುಬ್ರಮಣ್ಯ ಕುಮಾರ್ ಅವರು ಮೃತಪಟ್ಟಿದ್ದಾರೆಂದು ಕುಟುಂಬದವರು ಸೋಮವಾರ ಅವರ ಶವವನ್ನು ಫ್ರೀಜರ್ ಪೆಟ್ಟಿಗೆಯಲ್ಲಿ ಇಟ್ಟಿದ್ದಾರೆ. ಆದರೆ ಮರುದಿನ ಆ ವ್ಯಕ್ತಿ ಇನ್ನೂ ಉಸಿರಾಡುತ್ತಿರುವುದು ಕಂಡುಬಂದಿದೆ. ಫ್ರೀಜರ್ ಕಂಪನಿಯ ತಯಾರಕರು ಪೆಟ್ಟಿಗೆ ತೆಗೆದುಕೊಂಡು ಹೋಗಲು ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ. ಅವರು ಎಚ್ಚರಿಸಿದ ನಂತರ ಆ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ರಕ್ಷಿಸಿದ್ದಾರೆ.

ಏನಾಯಿತು?

ತಮ್ಮ 70 ವರ್ಷದ ಕಿರಿಯ ಸಹೋದರ ಸರವಣನ್ ಮತ್ತು ಅವರ ಸಹೋದರಿಯ ಮಗಳು ಗೀತಾ ಅವರೊಂದಿಗೆ ವಾಸಿಸುತ್ತಿದ್ದ ಬಾಲಸುಬ್ರಮಣ್ಯ ಕುಮಾರ್ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಮಲಗಿದ್ದರು.

ಅಕ್ಟೋಬರ್ 12 ರಂದು ಸರವಣನ್ ಅವರು ತಮ್ಮ ಸಹೋದರ ಬಾಲಸುಬ್ರಮಣ್ಯ ಸಾವನ್ನಪ್ಪಿದ್ದಾರೆಂದು ಭಾವಿಸಿ, ಶವವನ್ನು ಇರಿಸಲು ಫ್ರೀಜರ್ ಪೆಟ್ಟಿಗೆಯನ್ನು ತರಿಸಿದ್ದಾರೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸಂಬಂಧಿಕರೂ ಆಗಮಿಸಿದ್ದರು.

ಪೆಟ್ಟಿಗೆಯನ್ನು ಹಿಂತಿರುಗಿಸಲು ಫ್ರೀಜರ್ ಕಂಪನಿಯ ಸಿಬ್ಬಂದಿ ಸಹ ಆಗಮಿಸಿದರು. ಈ ವೇಳೆ ಫ್ರೀಜರ್ ಪೆಟ್ಟಿಗೆಯೊಳಗಿನ ವ್ಯಕ್ತಿ ಇನ್ನೂ ಉಸಿರಾಡುತ್ತಿರುವುದನ್ನು ಅವರು ನೋಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಸುಬ್ರಮಣಿಯಾ ಅವರನ್ನು ರಕ್ಷಿಸಿದ್ದಾರೆ. ವ್ಯಕ್ತಿಯನ್ನು ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೂರಮಂಗಲಂ ಸಬ್ ಇನ್ಸ್‌ಪೆಕ್ಟರ್ ರಾಜಶೇಖರನ್ ಈ ಬಗ್ಗೆ ಮಾತನಾಡಿದ್ದು, ಬಾಲಸುಬ್ರಮಣ್ಯ ಸೋಮವಾರ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಫ್ರೀಜರ್ ಬಾಕ್ಸ್ ಪಡೆದಿದ್ದಾರೆ. “ಮರುದಿನ ಸಂಜೆ 7 ರಿಂದ 8 ರವರೆಗೆ ಫ್ರೀಜರ್ ಕಂಪನಿಯ ಜನರು ಅದನ್ನು ಸಂಗ್ರಹಿಸಲು ಬಂದಾಗ, ಒಳಗೆ ಇರುವ ವ್ಯಕ್ತಿ ಇನ್ನೂ ಜೀವಂತವಾಗಿರುವುದನ್ನು ಅವರು ಕಂಡುಬಂದಿದೆ. ಏನಾಯಿತು ಎಂಬುದನ್ನು ತಿಳಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಬಾಕ್ಸ್ ಮನೆಯಲ್ಲಿದ್ದ ಎಲ್ಲಾ ಸಮಯದಲ್ಲೂ ಅವರನ್ನು ಫ್ರೀಜರ್ ಪೆಟ್ಟಿಗೆಯಲ್ಲಿ ಇಡಲಾಗಿದೆ ”ಎಂದು ಪೋಲೀಸ್ ಉಲ್ಲೇಖಿಸಿದ್ದಾರೆ.

ಬಾಲಸುಬ್ರಮಣಿಯಾ ಅವರ ಕುಟುಂಬ ಸದಸ್ಯರ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 287 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ವರ್ತನೆ) ಮತ್ತು 336 ಅಡಿ (ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತೆ) ಪ್ರಕರಣ ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights