ತಮ್ಮ ಕಾರಿನ ವೀಲ್ ತಾವೇ ಬದಲಿಸಿದ ಡಿಸಿ ರೋಹಿಣಿ ಸಿಂಧೂರಿ…

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕಾರ್ ಟೈರ್ ಅನ್ನು ತಾವೇ ಚೇಂಜ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗಿದೆ.

ಕುಟುಂಬಸ್ಥರೊಂದಿಗೆ ಹೊರಹೋಗಿದ್ದಾಗ ಕಾರಿನ ಟೈಯರ್ ಪಂಚರ್ ಆಗಿದೆ. ಈ ವೇಳೆ ರೋಹಿಣಿಯವರೇ ಖುದ್ದು ತಾವೇ ಟಯರ ತೆಗೆದಿದ್ದಾರೆ. ದಾರಿಯಲ್ಲಿ ಹೋಗುವ ಜನ ಇದನ್ನು ಗಮನಿಸಿ ವೀಡಿಯೋ ಮಾಡಿದ್ದಾರೆ. ವೀಡಿಯೋ ಮಾಡಿದ ವ್ಯಕ್ತಿ ವೀಡಿಯೋ ಮಾಡುತ್ತಾ ಅವರನ್ನು ಮಾತನಾಡಿಸಿದ್ದಾರೆ. “ ಮೇಡಂ ನೀವು ರೋಹಿಣಿ ಸಿಂಧೂರಿ ಅಲ್ವಾ.. ನೀವು ಪಂಕ್ಷರ್ ಹಾಕ್ತಾ ಇದಿರಾ..” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರೋಹಿಣಿ ನಕ್ಕು ಸುಮ್ಮನಾಗಿದ್ದಾರೆ. ತಮ್ಮ ಾಡಳಿತ ವೈಖರಿ, ಸರಳ ವ್ಯಕ್ತಿತ್ವದ ಮೂಲಕ ಹಲವರು ಜನರ ಮೆಚ್ಚುಗೆ ಪಡೆದಿದ್ದ ರೋಹಿಣಿ ಜನರ ಗಮನ ಸೆಳೆದಿದ್ದಾರೆ.

ಸದ್ಯ ಈ ವೀಡಿಯೋ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights