ದಾವಣಗೆರೆ: ಶಿಕ್ಷಕರ ತಲೆ ಮೇಲೆ ಕಸದ ಬುಟ್ಟಿ ಹಾಕಿದ್ದ ಪುಂಡ ವಿದ್ಯಾರ್ಥಿಗಳಿಗೆ ಶಾಲೆಯಿಂದ ಗೇಟ್‌ಪಾಸ್‌!

ಸರ್ಕಾರಿ ಶಾಲೆಯೊಂದರಲ್ಲಿ ಹಿರಿಯ ಶಿಕ್ಷಕರ ತಲೆ ಮೇಲೆ ಕಸದ ಬುಟ್ಟಿ ಹಾಕಿ ವಿದ್ಯಾರ್ಥಿಗಳು ಪುಂಡತನ ತೋರಿದ್ದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿತ್ತು. ಇದೀಗ, ಪುಂಡಾಟಿಕೆ ಮೆರೆದಿದ್ದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಟಿಸಿ (ವರ್ಗಾವಣೆ ಪತ್ರ) ಕೊಟ್ಟು ಹೊರಹಾಕಲಾಗಿದೆ.

ಡಿಸೆಂಬರ್ 3 ರಂದು ಘಟನೆ ನಡೆದಿತ್ತು. ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತರಗತಿಗೆ ಬಂದ ಹಿಂದಿ ಶಿಕ್ಷಕರು ಡಸ್ಟ್ ಬಿನ್ ನಲ್ಲಿದ್ದ ಕಸವನ್ನು ಹೊರಗೆ ಹಾಕುವಂತೆ ಹೇಳಿದ್ದಾರೆ. ಈ ವೇಳೆ ಕಸವನ್ನು ಹೊರಗೆ ಹಾಕಿ ಬಂದ ವಿದ್ಯಾರ್ಥಿಗಳಾದ ಆಕಾಶ್, ತರುಣ್, ಸಂದೀಪ್, ರಂಗನಾಥ್, ಉಜೇರ್ ಎಂಬುವರು ಖಾಲಿ ಬಕೆಟ್ ಅನ್ನು ಶಿಕ್ಷಕನ ತಲೆ ಮೇಲೆ ಹಾಕಿ ಗಲಾಟೆ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಇತರ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ವಿಷಯ ಹೊರ ಬಂದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎಂದು ಶಿಕ್ಷಕರು ವಿಷಯವನ್ನು ಮುಚ್ಚಿಟ್ಟಿದ್ದರು. ಆದರೆ, ವಿಡಿಯೋ ಮಾಡಿದ್ದ ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

ವಿಡಿಯೋ ನೋಡಿದ ನೆಟ್ಟಿಗರು ವಿದ್ಯಾರ್ಥಿಗಳ ದುರ್ನಡತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ತೀವ್ರ ಒತ್ತಡ ಕೇಳಿಬಂದಿದೆ. ಬಳಿಕ, ಚನ್ನಗಿರಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರೆಲ್ಲರಿಗೂ ಟಿಸಿ ಕೊಟ್ಟು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಲಂಚ ಪ್ರಕರಣಕ್ಕೆ ನೈತಿಕ ಅಧಃಪತನದ ಮುಖವಾಡ: ಲೋಕಾಯುಕ್ತದ ಶಿಫಾರಸ್ಸು ತಿರಸ್ಕರಿಸಿದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights