’ಕಾಂಗ್ರೆಸ್ ರೈತರು’ ಎಂದ ಸಿಟಿ ರವಿ; ಹೊಟ್ಟೆಗೆ ಏನು ತಿಂತಿಯಾ ಎಂದ ನೆಟ್ಟಿಗರು

 

ಕೇಂದ್ರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ದೇಶದ ರೈತರು ನಡೆಸುತ್ತಿರುವ ’ದೆಹಲಿ ಚಲೋ’ ಆಂದೋಲನವನ್ನು ಬಿಜೆಪಿಯ ಹೊಸ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಇದು ಕಾಂಗ್ರೆಸ್ ರೈತರು ಎಂದಿದ್ದು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಅವರೊಂದಿಗೆ ಹೊಟ್ಟೆಗೇನು ತಿಂತೀರ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

https://twitter.com/CTRavi_BJP/status/1332385819957415937?s=19

 

“ಭವಿಷ್ಯದಲ್ಲಿ ನೀವು ಮಾಡಿದ ಈ ಟ್ವೀಟ್ ಬಗ್ಗೆ ನಿಮ್ಮಲ್ಲಿ ಪಶ್ಚಾತಾಪ ಮೂಡಬಹುದು ಅಂತಾ ಭಾವಿಸುತ್ತೇನೆ. ಸಿಟಿ ರವಿಯವರೇ, ಮುಂದೊಂದಿನ ಈ ಟ್ವೀಟ್’ನ್ನು ಸಮರ್ಥಿಸೋಕೆ ತುಂಬಾ ಕಷ್ಟ ಪಡ್ತೀರಾ” ಎಂದು ಶರತ್‌ ಚಂದ್ರ ಎಂಬುವವರು ಟ್ವೀಟ್ ಮಾಡಿದ್ದಾರೆ.

“ಪುಕ್ಕಲು ಬಿಜೆಪಿಯ ನಾಯಕರಾಗಿ ನಿಮಗೆ ಹೀಗೆ ಹೇಳುವುದು ಅನಿವಾರ್ಯ. ರೈತರ ಹೋರಾಟ ದಮನಿಸುವ ನಿಮ್ಮ ಹತಾಶ ಪ್ರಯತ್ನಕ್ಕೆ ಧಿಕ್ಕಾರವಿದೆ’’ ಎಂದು ನಾಸಿರ್‌ ಸಜಿಪ ಎನ್ನುವವರು ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಶಾಂತ್‌ ನಾಯಕ್ “ರೈತ ಬೆಳೆದ ಅನ್ನ ಉಣ್ಣುವವನಾಗಿದ್ದರೆ ಈ ಮಾತು ಹೇಳ್ತಿದ್ದಿಲ್ಲ ಅಲ್ವೇ?” ಎಂದು ರವಿ ಅವರನ್ನು ಪ್ರಶ್ನಿಸಿದ್ದಾರೆ.

ಸುಭ್ರಮಣ್ಯ ಎಂಬವರು “ಹೊಟ್ಟೆಗೆ ಅನ್ನ ನೇ ತಿಂತೀರಾ ಹೇಗೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರೈತರನ್ನು ಹೀಯಾಳಿಸುವ ನೀಚ ನಾಯಕರು ನಿಮ್ಮ ಪಕ್ಷದಲ್ಲಿಯೇ ಕಾಣಲು ಸಿಗೋದ್” ಎಂದು ಇರ್ಷಾದ್ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೀಶ್ ಕೃಷ್ಣ ಎಂಬವರು, “ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು ಹೇಳುತ್ತೀರ, ಆದರೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಬ್ರಹತ್ ಪ್ರತಿಭಟನೆಯ ಹಿಂದೆ ಇರುವ ಪಕ್ಷ ಕಾಂಗ್ರೆಸ್ ಎಂದು ಕೂಡಾ ನೀವೇ ಹೇಳುತ್ತಿದ್ದೀರಿ. ಹೀಗೆ ಹೇಳಿದ್ರೆ ಹೇಗೆ ? ಯಾವ್ದಾದ್ರು ಒಂದನ್ನ ಹೇಳಿ. ಇದರ ಬಗ್ಗೆ ಎಲ್ಲರಿಗಿಂತ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಕಾಂಗ್ರೆಸ್ ಪಕ್ಷದವರಿಗಿದೆ” ಎಂದು ಚಟಾಕಿ ಹಾರಿಸಿದ್ದಾರೆ.

ಆನಂದ್ ನೇರಳಕಟ್ಟೆ, “ಯಾವ ಜಾತಿ ಅಂತಾನೂ ಹೇಳಿ , ನಿಗಮ ಮಾಡ್ಕೊಡೋರಂತೆ. ಎಲೆಕ್ಷನ್ ಸಮಯದಲ್ಲಿ ಧರ್ಮ. ಅಧಿಕಾರಕ್ಕೆ ಬಂದ ಮೇಲೆ ಜಾತಿ ಜಾತಿ ಅಷ್ಟೆ ನಿಮ್ದು” ಎಂದು ಕಿಡಿ ಕಾರಿದ್ದಾರೆ.

’Congress farmers’ called C t Ravi
ಕೇಂದ್ರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ದೇಶದ ರೈತರು ನಡೆಸುತ್ತಿರುವ ’ದೆಹಲಿ ಚಲೋ’ ಆಂದೋಲನವನ್ನು ಬಿಜೆಪಿಯ ಹೊಸ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಇದು ಕಾಂಗ್ರೆಸ್ ರೈತರು ಎಂದಿದ್ದು
ದೆಹಲಿ ಚಲೋ, ಕಾಂಗ್ರೆಸ್ ರೈತರು, ಸಿ.ಟಿ. ರವಿ, ಬಿಜೆಪಿ,

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights