BJP ಸಂಸದನನ್ನು ಟ್ರೋಲ್‌ ಮಾಡಿದ ಕ್ರಿಕೆಟಿಗ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಕ್ರಿಕೆಟ್‌ ಟೆಸ್ಟ್‌ ಮ್ಯಾಚ್ ಡ್ರಾ ಆಗಿದ್ದರ ಬಗ್ಗೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ನಕಾರಾತ್ಮವಾಗಿ ಟೀಕೆ ಮಾಡಿದ್ದರು. ಆ ಬಗ್ಗೆ ಆಟವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಸಂಸದರಿಗೆ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಾಟದಲ್ಲಿ ಹನುಮ ವಿಹಾರಿ 161 ಎಸೆತಗಳಲ್ಲಿ 23 ರನ್ ಬಾರಿಸಿದ್ದರು. ಈ ಮೂಲಕ ಅವರು ಪಂದ್ಯಾಟವನ್ನು ಡ್ರಾ ಮಾಡುವಲ್ಲಿ ಶ್ರಮಿಸಿದ್ದರು. ಆದರೆ ಬಾಬುಲ್ ಸುಪ್ರಿಯೋ, “109 ಎಸೆತಗಳಲ್ಲಿ 7 ರನ್‌‌‌ಗಳನ್ನು ಮಾಡಿದ್ದಾರೆ. ಹನುಮ ’ಬಿಹಾರಿ’ ಪಂದ್ಯಾಟವನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ, ಸಂಪೂರ್ಣ ಕ್ರಿಕೆಟನ್ನೇ ಕೊಲೆಗೈದಿದ್ದಾರೆ. ಅವರು ಜಯಗಳಿಸುವುದನ್ನು ಒಂದು ಆಯ್ಕೆಯಾಗಿ ಪರಿಗಣಿಸಿರಲಿಲ್ಲ. ದಯವಿಟ್ಟು ಗಮನಿಸಿ: ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ” ಎಂದು ಟ್ವೀಟ್ ಮಾಡಿದ್ದರು.

ಆದರೆ ಇದಕ್ಕೆ ಕ್ಯಾರೇ ಅನ್ನದ ವಿಹಾರಿ, ಅವರ ಟ್ವೀಟನ್ನು ರೀಟ್ವೀಟ್ ಮಾಡಿ ’ಹನುಮ ವಿಹಾರಿ’ ಎಂದಷ್ಟೇ ಉತ್ತರಿಸಿದ್ದಾರೆ. ಈ ಮೂಲಕ ಅವರ ಹೆಸರನ್ನು ತಪ್ಪಾಗಿ ಬಳಸಿದ್ದಕ್ಕಷ್ಟೇ ಉತ್ತರಿಸಿದ್ದಾರೆ. ಉಳಿದಂತೆ ಅವರ ಟೀಕೆಗೆ ಪ್ರತ್ಯುತ್ತರಿಸಲಿಲ್ಲ.

ಆದರೆ ರವಿಚಂದ್ರನ್ ಅಶ್ವಿನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಬುಲ್ ಸುಪ್ರೀಯೋ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ. ವಿಹಾರಿ ಮಾಡಿರುವ ರೀಟ್ವೀಟಿನ ಸ್ಕ್ರೀನ್‌‌ಶಾರ್ಟ್‌ ಚಿತ್ರವನ್ನು ಟ್ವೀಟ್ ಮಾಡಿರುವ ಅವರು ’ROFLMAX’ ಎಂದು ಬರೆದಿದ್ದಾರೆ.

https://twitter.com/ashwinravi99/status/1349305502312763392?s=20

’ROFLMAX’ ಒಂದು ಶಾರ್ಟ್ ಪದವಾಗಿದ್ದು, ಇಂಗ್ಲೀಷ್‌ನಲ್ಲಿ “ಬಿದ್ದೂ ಬಿದ್ದು ಎಲ್ಲೆಂದರಲ್ಲಿ ನಗುವುದು” ಎಂದರ್ಥ ಬರುತ್ತದೆ. ಈ ಪದವನ್ನು ತೀವ್ರವಾಗಿ ವ್ಯಂಗ್ಯ ಮಾಡುವಾಗ ಬಳಸುತ್ತಾರೆ.


ಇದನ್ನೂ ಓದಿ: ಭಾರತ V/S ಆಸ್ಟ್ರೇಲಿಯಾ: ಆಸಿಸ್‌ಗೆ ಮಣಿಯದ ಇಂಡಿಯಾ; 3ನೇ ಟೆಸ್ಟ್‌ ‘ಡ್ರಾ’ನಲ್ಲಿ ಮುಕ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights