ದುರ್ಘಟನೆ: ಎಲೆಕ್ಟ್ರಿಕ್‌ ಕೇಬಲ್‌ಗೆ ತಾಗಿ ಹೊತ್ತಿಹುರಿದ ಬಸ್‌; ಹಲವು ಮಂದಿ ಸಾವು!

ರಾತ್ರಿವೇಳೆ ಸಂಚರಿಸುತ್ತಿದ್ದ ಬಸ್‌ ವೊಂದಕ್ಕೆ ಬೆಂಕಿಹೊತ್ತಿಕೊಂಡಿದ್ದು, ಆರು ಮಂದಿ ಸಾವನ್ನಪಿರುವ ಘಟನೆ ರಾಜಸ್ಥಾನದ ಜಾಲೋರ್‌ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಸಂಚರಿಸುತ್ತಿದ್ದ ಖಾಸಗಿ ಬಸ್‌ವೊಂದು ಎಲೆಕ್ಟ್ರಿಕ್‌ ಕೇಬಲ್‌ಗೆ ತಾಗಿದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಬಸ್‌ನಲ್ಲಿದ್ದ ಆರು ಮಂದಿ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಅಲ್ಲದೆ, ಅವಘಡದಲ್ಲಿ 19 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌, ರಾಜಸ್ಥಾನದ ಮಂಡೋರ್‌ನಿಂದ ಬ್ಯಾವರ್‌ ಕಡೆಗೆ ಸಾಗುತ್ತಿತ್ತು ಎಂದು ಹೇಳಲಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಆರು ಜನರನ್ನು ಜೋಧಪುರದ ಆಸ್ಪತ್ರೆಗೆ ಸಾಗಿಸಲಾಗಿದೆ, 13 ಮಂದಿ ಜಾಲೋರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಾಲೋರ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎಸ್‌.ಪಿ.ಶರ್ಮಾ ತಿಳಿಸಿದ್ದಾರೆ.


ಇದನ್ನೂ ಓದಿ: ‘ಸೋನು ಸೂದ್ ಟೈಲರ್ ಶಾಪ್’ : ಬಟ್ಟೆ ಹೊಲಿದು ಟ್ರೋಲ್ ಆದ ರಿಯಲ್ ಹೀರೋ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights