ಒಂದೇ ಹಸು, ಇಬ್ಬರ ನಡುವೆ ಮಾಲೀಕತ್ವ ವಿವಾದ! ಪೊಲೀಸ್‌ ಠಾಣೆ ಎದುರು ನಿಂತ ಹಸು

ಹಸುವೊಂದರ ಮಾಲೀಕತ್ವಕ್ಕಾಗಿ ಇಬ್ಬರು ಜಗಳ ಮಾಡಿಕೊಂಡಿದ್ದು, ಸದ್ಯ ಹಸು ಪೊಲೀಸ್ ಠಾಣೆಯ ಮುಂದೆ ನಿಂತಿರುವ ಘಟನೆ ಒಡಿಶಾದ ಕೊರಾಪುಟ್‌ನಲ್ಲಿ ನಡೆದಿದೆ.

ಒಂದು ಹಸುವನ್ನು ಇಬ್ಬರೂ ಮಾಲೀಕರು ತಮ್ಮದು ಎಂದು ಹೇಳುತ್ತಲೇ ಇದ್ದು, ಈಗ ಆ ಹಸು ಯಾರದ್ದು, ಅದು ಯಾರಿಗೆ ಸೇರಬೇಕು ಎಂದು ನಿರ್ಧರಿಸುವ ಪಜೀತಿಯಲ್ಲಿ ಕೊರಾಪುಟ್‌ ಪೊಲೀಸರು ಸಿಕ್ಕಿಕೊಂಡಿದ್ದಾರೆ. ಹಸುವನ್ನು ಯಾರದ್ದು ಎಂದು ಹೇಗೆ ಗುರುತಿಸುವುದು ಎಂಬುದು ಪೊಲೀಸರಿಗೆ ತಲೆನೋವಾಗಿದೆ.

ಅಕ್ಟೋಬರ್ 1ರಂದು ದಾಖಲಾದ ದೂರಿನ ಅನ್ವಯ ಹಸುವಿನ ಮಾಲೀಕರನ್ನು ಕಂಡು ಹಿಡಿಯಲು ಪೊಲೀಸರು ಹಸುವನ್ನೇ ಠಾಣೆಗೆ ಕರೆಸಿದ್ದಾರೆ. ಕಮಲಾ ಮುದುಲಿ ಎಂಬ ಮಹಿಳೆ ತಮ್ಮ ನಾಗಮಣಿ ಎಂಬ ಹಸುವನ್ನು ಪ್ರಮೋದ್ ರೌತ್ ಎಂಬಾತ ತನ್ನ ಕೊಟ್ಟಿಗೆಯಲ್ಲಿ ಬಲವಂತವಾಗಿ ಕಟ್ಟಿಹಾಕಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಮೋದ್ ರೌತ್ ರನ್ನು ಕರೆಸಿಕೊಂಡಿದ್ದ ಪೊಲೀಸರು ಆತನ ಹೇಳಿಕೆ ಪಡೆದಿದ್ದರು. ಈ ವೇಳೆ ಪ್ರಮೋದ್ ತಾನು ಆ ಹಸುವನ್ನು ನಬರಂಗ್ ಪುರ್ ನಿಂದ ಖರೀದಿ ಮಾಡಿ ತಂದಿದ್ದಾಗಿ ಹೇಳಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ದೂರುದಾರೆ ಕಮಲಾ, ಅದು ನನ್ನ ಹಸು.. ನಾನು ಅದಕ್ಕೆ ನಾಗಮಣಿ ಎಂದು ಹೆಸರಿಟ್ಟಿದ್ದೇನೆ. ಆ ಹೆಸರಿನಿಂದ ಕೂಗಿದರೆ ಅದು ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ತಾನೂ ಕೂಡ ಹಸುವಿಗೆ ಲಕ್ಷ್ಮಿ ಎಂದು ಹೆಸರಿಟ್ಟಿದ್ದು, ಆ ಹೆಸರು ಕೂಗಿದರೆ ಹಸು ತಿರುಗಿ ನೋಡುತ್ತದೆ ಎಂದು ಪ್ರಮೋದ್ ಕೂಡ ಹೇಳಿದ್ದರು. ಇಬ್ಬರ ಹೇಳಿಕೆ ಪಡೆದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಹಸುವನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು.

ಹಸು ಠಾಣೆಗೆ ಬಂದ ಬಳಿಕ ಇಬ್ಬರಿಂದಲೂ ಹಸುವಿನ ಹೆಸರು ಕೂಗಿಸಿ ಆಗ ಹಸು ಯಾರ ಮಾತಿಗೆ ಪ್ರತಿಕ್ರಿಯೆ ನೀಡುತ್ತದೆಯೋ ಅವರೇ ಹಸುವಿನ ನಿಜವಾದ ಮಾಲಿಕರು ಎಂದು ತೀರ್ಮಾನಿಸುವ ಕುರಿತು ಪೊಲೀಸರು ನಿರ್ಧರಿಸಿದ್ದರು. ಬಳಿಕ ಪ್ರಮೋದ್ ಹಸುವನ್ನು ಕರೆತಂದಿದ್ದ. ಆದರೆ ಹಸು ಠಾಣೆಗೆ ಬಂದ ಬಳಿಕ ಪೊಲೀಸರಿಗೆ ಹೊಸ ತಲೆನೋವು ಆರಂಭವಾಗಿತ್ತು. ಹಸು ಇಬ್ಬರ ಮಾತಿಗೂ ಪ್ರತಿಕ್ರಿಯೆ ನೀಡುತ್ತಿತ್ತು. ಇದರಿಂದ ಗೊಂದಲಕ್ಕೀಡಾದ ಪೊಲೀಸರು ಹಸುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕರೆಸಿ ಮಾಹಿತಿ ಪಡೆದಾಗ ಹಸು ಇಬ್ಬರ ಬಳಿಯೂ ಪಳಗಿದ್ದರಿಂದ ಅದು ಇಬ್ಬರಿಗೂ ಪ್ರತಿಕ್ರಿಯೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಹಸುವನ್ನು ಬೇರೆ ಕೊಟ್ಟಿಗೆಯಲ್ಲಿ ಬಿಟ್ಟಿರುವ ಪೊಲೀಸರು ನಿಜವಾದ ಮಾಲಿಕರು ಯಾರು ಎಂದು ತಿಳಿಯುವವರೆಗೂ ಹಸು ಇಲ್ಲೇ ಇರಲಿದೆ ಎಂದು ಹೇಳಿದ್ದಾರೆ. ಅಂತೆಯೇ ಒಂದು ಹಸುವಿನ ಸಂಬಂಧ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದೀಗ ಈ ಹಸು ಯಾರ ಮಾಲೀಕತ್ವಕ್ಕೆ ಹೊಗಲಿದೆ ಎಂಬುದು ಇಡೀ ಗ್ರಾಮದವರು ಅಚ್ಚರಿಯನ್ನು ಕರೆಳಿಸಿದೆ.


Read Also: Fact Check: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂದು ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights