ಗೋ ಮೂತ್ರ, ಸಗಣಿಯಿಂದ ದೇಶದ ಆರ್ಥಿಕತೆಯನ್ನು ಬಲಪಡಿಸಬಹುದು: ಮಧ್ಯಪ್ರದೇಶ ಸಿಎಂ

ಹಸು, ಗೋ ಮೂತ್ರ, ಮತ್ತು ಸಗಣಿಯು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಮರ್ಥಗೊಳಿಸುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಸರ್ಕಾರವು ಹಸುಗಳ ಅಭಯಾರಣ್ಯಗಳು ಮತ್ತು ಆಶ್ರಯಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಇವುಗಳನ್ನು ಏಕಾಂಗಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಮಾಜದ ಸಹಭಾಗಿತ್ವದ ಅಗತ್ಯವಿದೆ ಎಂದು ಅವರು ಭಾರತೀಯ ಪಶುವೈದ್ಯಕೀಯ ಸಂಘವು ಆಯೋಜಿಸಿದ್ದ ಮಹಿಳಾ ಪಶುವೈದ್ಯರ “ಶಕ್ತಿ 2021” ಸಮಾವೇಶದಲ್ಲಿ ಹೇಳಿದ್ದಾರೆ.

ನಾವು ಬಯಸಿದರೆ, ನಮ್ಮ ದೇಶದ ಆರ್ಥಿಕತೆಯನ್ನು ಬಲ ಪಡಿಸಬಹುದು. ಗೋವು, ಗೋಮೂತ್ರ ಹಾಗೂ ಸಗಣಿಯ ಮೂಲಕ ದೇಶದ ಆರ್ಥಿಕತೆಯನ್ನು ಹೆಚ್ಚಿಸಬಹುದು. ಮರಗಳ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಸಗಣಿಯಿಂದ ತಯಾರಿಸಲಾದ ದಿಮ್ಮಿ (ಗೌಕಸ್ತ್) ಬಳಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ, ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಸು ಸಾಕಣೆ ಮಾಡುತ್ತಿದ್ದು, ಡೈರಿ ವ್ಯವಹಾರದ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕನ ಜೊತೆ ಓಡಿಹೋದ ಬಾಲಕಿಗೆ ಥಳಿಸಿ, ಮಸಿ ಬಳಿದು ಮೆರವಣಿಗೆ ಮಾಡಿದ ಗ್ರಾಮಸ್ಥರು; 22 ಜನರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights