ವಧು ಸೆಕೆಂಡ್ ಫ್ಲೋರ್ ವರ ಫಸ್ಟ್ ಫ್ಲೋರ್ : ಕಿಟಕಿ ಮೂಲಕ ನಡಿತು ಮದುವೆ..!

ಕೊರೊನಾವೈರಸ್ ಮಧ್ಯೆ ದೇಶಾದ್ಯಂತ ಜನ ಮದುವೆಯಾಗುತ್ತಿದ್ದಾರೆ. ಇದರಲ್ಲಿ ವಿಶಿಷ್ಟವಾದ ರೀತಿಯಲ್ಲಿ ಮದುವೆಯಾದ ದಂಪತಿಗಳು ಇದ್ದಾರೆ. ನಾಲ್ಕು ವರ್ಷಗಳಿಂದ ಲಿವಿಂಗ್ ಟೂಗೆದರ್ ನಲ್ಲಿದ್ದ ಲಾರೆನ್ ಮತ್ತು ಪ್ಯಾಟ್ರಿಕ್ ಡೆಲ್ಗಾಡೊ ಇಬ್ಬರೂ ನವೆಂಬರ್ 20 ರಂದು ವಿವಾಹವಾದರು. ಇಬ್ಬರ ಮದುವೆಯ ಫೋಟೋಗಳು ಎಲ್ಲರಿಗೂ ಸಂತೋಷ ತಂದಿದೆ. ಯಾಕೆಂದರೆ ಇವರಿಬ್ಬರ ಮದುವೆ ತುಂಬಾನೇ ಡಿಫ್ರೆಂಟಾಗಿ ನೆರವೇರಿದೆ. ಮಾತ್ರವಲ್ಲದೇ ತುಂಬಾ ಸರಳವಾಗಿ ನೆರವೇರಿದೆ.

ಹೌದು… ದಂಪತಿಗಳಿಬ್ಬರೂ ಮದುವೆ ಸ್ಥಳ ಮತ್ತು ಅತಿಥಿ ಪಟ್ಟಿಯನ್ನು ಮೂರು ಬಾರಿ ಬದಲಾಯಿಸಿದ್ದರು. ಯಾಕೆಂದರೆ ಲಾರೆನ್ ಅವರಿಗೆ ಮದುವೆಗೂ ಐದು ದಿನಗಳ ಮೊದಲು ಕೊರೊನಾ ಸೋಂಕು ತಗುಲಿದೆ.

ಹೀಗಾಗಿ ಮದುವೆ ರದ್ದಾಯಿತು. ಬಳಿಕ ವಧು-ವರರಿಬ್ಬರೂ ಕ್ಯಾಲಿಫೋರ್ನಿಯಾದ ನನ್ನ ತಾಯಿಯ ಒಂಟಾರಿಯೊ ಮನೆಯಲ್ಲಿ ಕ್ಯಾರೆಂಟೈನ್‌ನಲ್ಲಿ ವಿವಾಹವಾಗಲು ನಿಶ್ಚಯಿಸಿದ್ದಾರೆ. ಮದುವೆಯ ಸಮಯದಲ್ಲಿ ಬೂದು ಬಣ್ಣದ ಸೂಟ್ ಧರಿಸಿದ ಪ್ಯಾಟ್ರಿಕ್ ಡೆಲ್ಗಾಡೊ ಮನೆಯ ಹೊರಗೆ, ವಧು ಎರಡನೇ ಮಹಡಿಯ ಮಲಗುವ ಕೋಣೆಯ ಕಿಟಕಿಯ ಮೇಲೆ ಕುಳಿತಿದ್ದಳು. ದೂರದಲ್ಲಿರುವ ಅವರು ಪರಸ್ಪರ ಸಂಪರ್ಕದಲ್ಲಿರಲು ಇಬ್ಬರೂ ಹೂವಿನಿಂದ ಅಲಂಕರಿಸಿದ ರಿಬ್ಬನ್ ಅನ್ನು ಹಿಡಿದಿದ್ದರು. ಲಾರೆನ್ ತನ್ನ ಹಳೆಯ ಉಡುಪನ್ನು ಧರಿಸಿ ತಾನೇ ಮೇಕ್ಅಪ್  ಮಾಡಿಕೊಂಡಿದ್ದಳು.

ಇದಕ್ಕೆ ಸಂಬಂಧಿಸಿದಂತೆ ವಿವಾಹ ಛಾಯಾಗ್ರಾಹಕ ಜೆಸ್ಸಿಕಾ ಜಾಕ್ಸನ್ ‘2020 ರಲ್ಲಿ ಕೋವಿಡ್-19 ಸಮಯದಲ್ಲಿ ನಾನು ಅತ್ಯುತ್ತಮ ವಿವಾಹದ ಫೋಟೋಗಳನ್ನು ತೆಗೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಮದುವೆಯಲ್ಲಿ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 10 ಅತಿಥಿಗಳು ಮಾತ್ರ ಭಾಗವಿಹಿಸಿದ್ದರು. ಮದುವೆಗೆ ಆಗಮಿಸಿದ ಸಂಬಂಧಿಕರೆಲ್ಲರೂ ಕೊರೊನಾ ವರದಿಯನ್ನು ಹೊಂದಿದ್ದರು. ಈ ಸಮಯದಲ್ಲಿ ಕೆಲವು ಅತಿಥಿಗಳು ಈ ಮದುವೆಯನ್ನು ರಸ್ತೆಯಲ್ಲಿ ನಿಲ್ಲಿಸಿರುವ ಕಾರುಗಳಿಂದ ಮತ್ತು ಕೆಲವರು ಹೊರಗಿನಿಂದ ನೋಡಿ ಆಶೀರ್ವದಿಸಿದ್ದಾರೆ.

ಈ ವಿಭಿನ್ನ ಮದುವೆ ಕಂಡು ಜನ ಸಂತೋಷ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights