ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ; ವಿಪಕ್ಷ ನಾಯಕರಾಗಬಾರದು: ಜೆಡಿಯು

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹಲವಾರು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಬಿಹಾರ ವಿಧಾನಸಭಾ ಪ್ರತಿಪಕ್ಷದ ನಾಯಕರಾಗುವುದನ್ನು ತಡೆಯಬೇಕು ಎಂದು ಬಿಹಾರದ ಆಡಳಿತಾರೂಢ ಪಕ್ಷ ಜೆಡಿಯು ಒತ್ತಾಯಿಸಿದೆ.

ಜೆಡಿಯು ಪಕ್ಷದಿಂದ ಸಚಿವರಾಗಿದ್ದ ಮೇವಾಲಾಲ್ ಚೌಧರಿ ಅವರು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಜೆಡಿಯು ತೇಜಸ್ವಿ ವಿರುದ್ಧ ಈ ಬೇಡಿಕೆ ಇಟ್ಟಿದೆ.

“ತೇಜಶ್ವಿ ಯಾದವ್ ಅವರು “ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿಯೂ ಸಹ ಆರೋಪಿಯಾಗಿದ್ದಾರೆ” ಎಂದು ಜೆಡಿಯು ಅಧ್ಯಕ್ಷ ವಸಂತ್‌ ನಾಯಕ್‌ ಸಿಂಗ್‌ ಹೇಳಿದ್ದಾರೆ.

ರಘೋಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ನಾಮಪತ್ರ ಸಲ್ಲಿಸುವಾಗ, ಅವರು ಎದುರಿಸುತ್ತಿರುವ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ ಮತ್ತು “ಉದ್ದೇಶಪೂರ್ವಕ ಲೋಪ”ವನ್ನು ಗಮನಿಸಬೇಕು. ತೇಜಸ್ವಿಯವರಿಗೆ ವಿರೋಧ ಪಕ್ಷದ ನಾಯಕರಾಗುವ ಅವಕಾಶವನ್ನು ನೀಡಬಾರದು ಎಂದು ಚುನಾವಣಾ ಆಯೋಗವನ್ನು ಜೆಡಿಯು ನಾಯಕರು ಒತ್ತಾಯಿಸಿದ್ದಾರೆ.

ಭಾಗಲ್ಪುರ್ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಕ್ಕೆ 2010-15ರ ಅವಧಿಯಲ್ಲಿ ಜೆಡಿಯು ಶಾಸಕ (ಮಾಜಿ ಸಚಿವ) ಚೌಧರಿ ಉಪಕುಲಪತಿಯಾಗಿದ್ದರು. ಆ ಸಂದರ್ಭದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡುವಾಗ ನಡೆದ ಭ್ರಷ್ಟಾಚಾರದಲ್ಲಿ ಜೆಡಿಯು ಚೌಧರಿ ಭಾಗಿಯಾಗಿದ್ದಾರೆ. ಅವರ ವಿರುದ್ದ ಹಗರಣದ ಆರೋಪವಿದೆ ಅವರನ್ನು ಹೇಗೆ ಸಚಿರನ್ನಾಗಿ ಮಡುತ್ತೀರಿ ಎಂದು ಆರ್‌ಜೆಡಿ ಪ್ರಶ್ನಿಸಿತ್ತು. ಇದಾದ ನಂತರ, ಚೌದರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಇದನ್ನೂ ಓದಿ: ನಿತೀಶ್‌ ಸಂಪುಟ: ಮೂರೇ ದಿನಕ್ಕೆ ರಾಜೀನಾಮೆ ನೀಡಿದ ಬಿಹಾರ ಸಚಿವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights