‘ಪೊಗರು’ ಚಿತ್ರದ ವಿವಾದಿತ ದೃಶ್ಯ : 14 ಸೀನ್ ಕಟ್ – ನಂದಕಿಶೋರ್ ಕ್ಷಮೆಯಾಚನೆ!

ಪೊಗರು ಚಿತ್ರದಲ್ಲಿ ವಿವಾದಿತ ದೃಶ್ಯಗಳು ಬ್ರಾಹ್ಮಣರನ್ನು ಅವಮಾನಿಸುತ್ತಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಆರೋಪಿಸಿದ್ದಾರೆ.

ಹೌದು…  ಕಳೆದ ಶುಕ್ರವಾರ ಬಿಡುಗಡೆಗೊಂಡ ‘ಪೊಗರು’ ಸಿನಿಮಾ ಜನ ಮನ ಗೆಲ್ಲುತ್ತಿದ್ದಂತೆ ಚಿತ್ರದಲ್ಲಿ ವಿವಾದಿತ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಕಳನಟ ಪೂಜೆಗೆ ಕುಳಿತ ಅರ್ಚಕನ ಭುಜದ ಮೇಲೆ ಕಾಲು ಇಡುವ ದೃಶ್ಯ ಸೇರಿದಂತೆ 14 ದೃಶ್ಯಗಳಲ್ಲಿ ಬ್ರಾಹ್ಮಣರನ್ನು ಅವಮಾನಿಸಲಾಗಿದೆ ಎನ್ನಲಾಗುತ್ತಿದೆ.

ಬ್ರಾಹ್ಮಣ ಸಮುದಾಯ ಪ್ರತಿಭಟನೆಯ ಹಿನ್ನೆಲೆ ಸಿನಿಮಾ ತಂಡ ಫಿಲ್ಮ ಚೇಂಬರ್ ನಲ್ಲಿ ಸಭೆ ನಡೆಸಿ ಕ್ಷಮೆ ಕೇಳಿದೆ. ಮಾತ್ರವಲ್ಲದೇ ಸಿನಿಮಾ ನಿರ್ದೇಶಕ ನಂದಕಿಶೋರ್ ಮಾತನಾಡಿ, ನಮಗೆ ಬ್ರಾಹ್ಮಣ ಅಥವಾ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶ ಇಲ್ಲ. ಒಂದು ವೇಳೆ ನಿಮಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಬೇಸರ ತಂದ ದೃಶ್ಯಗಳನ್ನು ಇವತ್ತು ಅಥವಾ ನಾಳೆ ಕಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಪೊಗರು ವಿವಾದಕ್ಕೆ ಶೋಭಾ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ, “ಹಿಂದೂಗಳನ್ನು ಅವಮಾನಿಸುವುದು ಫ್ಯಾಷನ್ ಆಗಿಬಿಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights