ಮುಂದುವರೆದ BJP ಅತೃಪ್ತರ ಆಕ್ರೋಶ: ಕೇಸರಿ ಪಕ್ಷದಲ್ಲಿ ಬಂಡಾಯದ ತಿರುವು?

ರಾಜ್ಯ ಮಂತ್ರಿ ಮಂಡಲದ ವಿಸ್ತರಣೆಯಾಗಿದ್ದು, ನಿನ್ನೆ (ಬುಧವಾರ) ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರೆ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅತೃಪ್ತರ ಆಕ್ರೋಶ, ಆವೇಶ ಮಾತ್ರ ಇನ್ನೂ ತಣ್ಣಗಾಗಿಲ್ಲ. ರಾಜ್ಯ ಬಿಜೆಪಿಯ ನಾಯತ್ವದ ವಿರುದ್ದ ಕಿಡಿಕಾರಿರುವ BJP ಅತೃತ್ವ ಶಾಸಕರು ಹೈಕಮಾಂಡ್‌ ಕದ ತಟ್ಟಲು ಮುಂದಾಗಿದ್ದಾರೆ.

ಗುರುವಾರ ಬೆಳಗ್ಗೆ ಎಂಪಿ ರೇಣುಕಾಚಾರ್ಯ ದೆಹಲಿಗೆ ತೆರಳಿದ್ದು, ರಾಜ್ಯ ಬಿಜೆಪಿಯ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ. ಹೊಸದಾಗಿ ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ಎಂಎಲ್‌ಸಿ ಯೋಗೇಶ್ವರ್‌ ವಿರುದ್ದ ಅವರು ದೂರು ಹೊರಿಸಲಿದ್ದಾರೆ ಎಂದು ಹೇಳಲಾಗಿದೆ.

ಮೆಗಾಸಿಟಿ ಹಗರಣದಲ್ಲಿ ಆರೋಪಿಯಾಗಿರುವ ಸಿ.ಪಿ.ಯೋಗೇಶ್ವರ್ ವಿರುದ್ದ 420 ಕೇಸ್‌ ದಾಖಲಾಗಿದೆ. ಅವರನ್ನು ಮಂತ್ರಿಮಂಡಲದಲ್ಲಿ ಇಟ್ಟುಕೊಂಡು ಮುಂಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಗೆ ಆಡಳಿತ ನಡೆಸುತ್ತಾರೆ. ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದು ರೇಣುಕಾಚಾರ್ಯ ಅರೋಪಿಸಿದ್ದರು.

ಇದನ್ನೂ ಓದಿ: ವಿಶ್ವನಾಥ್‌ಗೆ ಕೃತಜ್ಞತೆ ಇಲ್ಲ; ಅದಕ್ಕೆ ಬಿಎಸ್‌ವೈ ಕೂಡ ಮಂತ್ರಿ ಮಾಡಿಲ್ಲ: ಸಿದ್ದರಾಮಯ್ಯ ವ್ಯಂಗ್ಯ

ಇದು ಯಾವ ರೀತಿಯ ಸಚಿವ ಸಂಪುಟ ಎಂಬುದು ಅರ್ಥವಾಗುತ್ತಿಲ್ಲ. ಮೋಸ-ವಂಚನೆ ನಡೆಸಿದೆ ಎಂದು ತೆರದಾಳ ಶಾಸಕ ಸಿದ್ದುಸವದಿ ಆರೋಪಿಸಿದ್ದಾರೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೂ ಒತ್ತು ಕೊಟ್ಟಿಲ್ಲ. ನಮ್ಮಂತ ಹಿರಿಯರಿಗೂ ಅವಕಾಶ ನೀಡಿಲ್ಲ. ಬ್ಲಾಕ್‍ಮೇಲ್ ಮಾಡುವವರಿಗೆ, ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿ ಪಕ್ಷಕ್ಕೆ ಬಂದವರನ್ನು ಮಂತ್ರಿ ಮಾಡಲಾಗಿದೆ. ಈ ರೀತಿ ಮಾಡುವುದಾದರೆ ನಿಷ್ಟರು ಎಲ್ಲಿಗೆ ಹೋಗಬೇಕೆಂದು ಶಾಸಕ ಅಭಯ್‍ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ನಾವು ಪಕ್ಷಕ್ಕೆ ದುಡಿದಿದ್ದೇವೆ. ಸೋತವರನ್ನು ತಂದು ಮಂತ್ರಿ ಮಾಡುವುದನ್ನು ನಾನು ಎಲ್ಲಿಯೂ ನೋಡಿಲ್ಲ. ತಮಗೆ ಬೇಕಾದವರಿಗೆ ಸಂಪುಟದಲ್ಲಿ ಸ್ಥಾನಕೊಟ್ಟರೆ ಪಕ್ಷಕ್ಕಾಗಿ ದುಡಿದವರ ಕತೆ ಏನು ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಈಗ ನಮ್ಮನ್ನೇ ಕಡೆಗಣಿಸುತ್ತಿದ್ದಾರೆ ಎಂದು ಹಳ್ಳಿಹಕ್ಕಿ ವಿಶ್ವನಾಥ್‌ ಬಿಎಸ್‌ವೈ ವಿರುದ್ದ ಕೆಂಡಕಾರಿದ್ದಾರೆ.

ಬಹುತೇಕ ಶಾಸಕರ ಅಸಮಾಧಾನ ಇನ್ನೂ ಶಮನಗೊಂಡಿಲ್ಲ. ಪಕ್ಷದ ವರಿಷ್ಟರು ಅವರನ್ನು ಕರೆದು ಮಾತನಾಡುವ ವ್ಯವದಾನಕ್ಕೂ ಹೋಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.


ಇದನ್ನೂ ಓದಿ: ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು; BJPಯಲ್ಲಿ ಭುಗಿಲೆದ್ದ ಭಿನ್ನಮತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights