ಪ್ರತಿಭಟನೆ ಸಂವಿಧಾನಿಕ ಹಕ್ಕು; ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್‌

ಮೋದಿ ಸರ್ಕಾರದ ಹೊಸ ಮೂರು ಕೃಷಿ ನೀತಿಗಳ ವಿರುದ್ಧ ರೈತರ ಪ್ರತಿಭಟನೆ 22ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಶಾಂತಿಯುವಾಗಿ ಪ್ರತಿಭಟನೆ ನಡೆಸುತ್ತಿದ್ದು, ಅವರ ಹೋರಾಟ ಮುಂದುವರೆಯಲಿ, ಪೊಲೀಸರು ಏನು ಮಾಡಲಾಗುವುದಿಲ್ಲ. ರೈತರು ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಹೊಂದಿದ್ದಾರೆ ಎಂದು ಸಿಜೆಐ ಎಸ್.ಎ ಬೋಬ್ಡೆ ಹೇಳಿದ್ದಾರೆ.

ರೈತರು ದೆಹಲಿ ತಲುಪುವು ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಔಷಧಿ ಪೂರೈಕೆಗೆ ತಡೆಯಾಗಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಹೋರಾಟ ನಿರತರನ್ನು ರೈತರನ್ನು ಇಲ್ಲಿಂದ ಹೊರಗೆ ಕಳಿಸಬೇಕೆಂದು ಸುಪ್ರೀಂನಲ್ಲಿ ದಾಖಲಾದ ಸರಣಿ ಪಿಐಎಲ್‌ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ “ದೆಹಲಿಯ ರಸ್ತೆಗಳನ್ನು ಮುಚ್ಚದೆ ರೈತರು ಪ್ರತಿಭಟನೆ ಮುಂದುವರೆಸಬಹುದು” ಎಂದಿದೆ.

ನಿನ್ನೆ ಈ ವಿಚಾರದ ಕುರಿತು ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಈ ಸಮಸ್ಯೆಯನ್ನು ನಿಭಾಯಿಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸಿ, ಕೃಷಿಯ ಜ್ಞಾನ ಹೊಂದಿರುವ ಸ್ವತಂತ್ರ ಸದಸ್ಯರು ಮತ್ತು ಎರಡೂ ಕಡೆಯವರನ್ನು ಕೇಳಿ ಮತ್ತು ಏನು ಮಾಡಬೇಕೆಂಬುದರ ಬಗ್ಗೆ ವರದಿ ನೀಡಿ ಎಂದು ಎಸ್‌.ಎ ಬೋಬ್ಡೆ ತಿಳಿಸಿದ್ದರು. ಮಾತುಕತೆಗಳಲ್ಲಿ ಕೇಂದ್ರವು ಯಶಸ್ವಿಯಾಗುವುದಿಲ್ಲ ಎಂದು ನಾವು ನಿನ್ನೆ ಗಮನಿಸಿದ್ದೇವೆ. ನಿಮ್ಮ ತೀರ್ಮಾನಗಳನ್ನು ರೈತರು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುವುದಿಲ್ಲ. ಸಮಿತಿ ತೀರ್ಮಾನಿಸಲಿ ಎಂದು ಬೋಡ್ಡೆ ಹೇಳಿದ್ದಾರೆ.


ಇದನ್ನೂ ಓದಿ: ಕೃಷಿ ಕಾಯ್ದೆ ರದ್ದಾಗದಿದ್ದರೆ ಖೇಲ್‌ ರತ್ನ ಪ್ರಶಸ್ತಿ ವಾಪಸ್‌: ಬಾಕ್ಸರ್ ವಿಜೇಂದರ್ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights