ರೋಗಿಯ ಮರಣಾ ನಂತರ ವೈದ್ಯರೊಂದಿಗೆ ಕಾಂಗ್ರೆಸ್‌ ಶಾಸಕ ಅಸಭ್ಯ ವರ್ತನೆ; ವೈದ್ಯ ರಾಜೀನಾಮೆ!

ರೋಗಿಯೊಬ್ಬರು ಸಾವನ್ನಪ್ಪಿದ ನಂತರ ಮಾಜಿ ಸಚಿವ ಪಿಸಿ ಶರ್ಮಾ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ತಮ್ಮೊಂದಿಗ ಅಸಭ್ಯಾವಾಗಿ ವರ್ತಿಸಿದರು ಎಂದು ಮಧ್ಯಪ್ರದೇಶದ ಸರ್ಕಾರಿ ವೈದ್ಯರೊಬ್ಬರು ಆರೋಪಸಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

“ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಇಂದು ಬೆಳಿಗ್ಗೆ ತುರ್ತು ವಾರ್ಡ್‌ಗೆ ದಾಖಲಿಸಲಾಗಿತ್ತು. ಡಾ.ಯೋಗೇಂದ್ರ ಅವರು ಯೋಗಿಯವರ ಕುಟುಂಬಕ್ಕೆ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮೊದಲೇ ಹೇಳಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ನಿಧನರಾದರು. ನಂತರ ಕೆಲವು ರಾಜಕಾರಣಿಗಳು ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸಿದರು. ಇದರಿಂದಾಗಿ ಹಿರಿಯ ವೈದ್ಯ ಯೋಗೇಂದ್ರ ಶ್ರೀವಾಸ್ತವ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರಿ ಜೆಪಿ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ರಾಕೇಶ್ ಶ್ರೀವಾಸ್ತವ ಅವರು ಪಿಟಿಐಗೆ ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾಜಿ ಸಚಿವ ಶರ್ಮಾ ಮತ್ತು ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಯೋಗೇಂದ್ರ ಚೌಹಾನ್ ಅವರು ಡಾ.ಯೋಗೇಂದ್ರ ಶ್ರೀವಾಸ್ತವ ಅವರ ಮೇಲೆ ಕೂಗುತ್ತಿದ್ದಾರೆಂದು ತೋರಿಸಲಾಗಿದೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್ ಅವರು ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, “ಈ ಘಟನೆಯಿಂದ ಬೇಸರಗೊಂಡ ಹಿರಿಯ ವೈದ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ. ನಾವು ಸುಸಂಸ್ಕೃತ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಇದೀಗ ಅದಕ್ಕಾಗಿ ಒಟ್ಟಾಗಿ ನಿಲ್ಲುವ ಸಮಯವಾಗಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ದೊಂಬಿಯನ್ನು ಸೃಷ್ಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಾದುದ್ದಲ್ಲ” ಎಂದು ಹೇಳಿದ್ದಾರೆ.

ಶರ್ಮಾ ಅವರನ್ನು ಸಂಪರ್ಕಿಸಿದಾಗ “ಗಂಭೀರ ರೋಗಿಯ ಕುಟುಂಬವು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಲು ಪ್ರಯತ್ನಿಸಿದಾಗ, ವೈದ್ಯರು ನನ್ನೊಂದಿಗೆ ಮಾತನಾಡಲಿಲ್ಲ. ಬದಲಾಗಿ, ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದರು” ಎಂದು ಶರ್ಮಾ ಹೇಳಿದ್ದಾರೆ.

“ನನ್ನ ಬೆಂಬಲಿಗರು ವೈದ್ಯರೊಂದಿಗೆ ಜೋರಾಗಿ ಮಾತನಾಡಿದರು. ನಂತರ ನಾನು ಅವರಿಗೆ ಕ್ಷಮೆಯಾಚಿಸಿದೆ. ನನ್ನ ಕ್ಷೇತ್ರದ ರೋಗಿಯೊಬ್ಬರು ಇಂದು ಮಧ್ಯಾಹ್ನ ನಿಧನರಾದರು. ಅಂತಹ ಸಂದರ್ಭಗಳಲ್ಲಿ ಸೂಕ್ಷ್ಮ ವ್ಯಕ್ತಿಯು ಕೋಪಗೊಳ್ಳುವುದಿಲ್ಲವೇ? ಬಡ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಲು ಹೇಳಲಾಗುತ್ತಿದೆ. ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ” ಎಂದು ಶರ್ಮಾ ಹೇಳಿದ್ದಾರೆ.

Read Also: ಹಳೇ ಮೈಸೂರು ಭಾಗದಲ್ಲಿ ಬೇರು ಬಿಡಲು ಬಿಜೆಪಿ ಯತ್ನ; ಪಕ್ಷದ ಚಟುವಟಿಕೆಗಳಿಗೆ ಕೇಂದ್ರವಾದ ಹಾಸನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights