ಪಂಜಾಬ್‌ ಸಿಎಂ ಆಗುವ ಆಫರ್‌ ನಿರಾಕರಿಸಿದ ಕಾಂಗ್ರೆಸ್‌ ನಾಯಕಿ ಅಂಬಿಕಾ ಸೋನಿ!

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ ಅವರು ಸಿಎಂ ರಾಜೀನಾಮೆ ನೀಡಿದ್ದಾರೆ. ನಿನ್ನೆ (ಶನಿವಾರ) ಸಂಜೆ ಕಾಂಗ್ರೆಸ್‌ ಶಾಸಕರ ಸಭೆ ನಡೆದಿದ್ದು, ಅನುಭವಿ ರಾಜಕಾರಣಿ ಅಂಬಿಕಾ ಸೋನಿ ಅವರಿಗೆ ಸಿಎಂ ಆಫರ್‌ ನೀಡಲಾಗಿತ್ತು. ಆದರೆ, ಅವರು ಆ ಆಫರ್‌ಅನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಅವರೊಂದಿಗೆ ಚರ್ಚಿಸಿರುವ ಅಂಬಿಕಾ ಸೋನಿ ಅವರು ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ.

1969ರಲ್ಲಿ ಇಂಧಿರಾ ಗಾಂಧಿ ಅವರು ಅಂಬಿಕಾ ಸೋನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದರು. ಪಂಜಾಬ್‍ನ ಓಶಿಯಾರ್‍ಪುರ್ ಜಿಲ್ಲೆಯವರಾದ ಅಂಬಿಕಾ ಸೋನಿ ಅವರು ಹಲವಾರು ಬಾರಿ ಪಂಜಾಬ್‍ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಸ್ಥಾನದ ರೇಸ್‍ನಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಕ್ಕರ್, ಲೂಯಾನಾ ಸಂಸದ ರವನಿತ್‍ಸಿಂಗ್ ಬಿಟ್ಟು, ರಾಜ್ಯಸಭಾ ಸದಸ್ಯ ಪ್ರತಾಪ್ ಸಿಂಹ್ ಭಾಜ್ವಾ, ಸುಖ್‍ಜೀಂದರ್‍ಸಿಂಗ್ ರಾಂಧವ್ ಅವರ ಹೆಸರುಗಳು ಕೇಳಿಬಂದಿವೆ.

ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಬದಲಾವಣೆ; ಇಂದಿನ ಪ್ರಮುಖ 5 ಬೆಳವಣಿಗೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights