ಬಿಜೆಪಿಗೆ ಬಂದರೆ ಅಧ್ಯಕ್ಷ ಸ್ಥಾನ ಕೊಡಿಸುತ್ತೇವೆ; ಗ್ರಾಮ ಪಂ. ಸದಸ್ಯನಿಗೆ BJP ಜಿಲ್ಲಾಧ್ಯಕ್ಷ ಆಮಿಷವೊಡ್ಡಿದ ಆಡಿಯೋ ವೈರಲ್!

ತುಮಕೂರು ಗ್ರಾಮಾಂತರ ಪ್ರದೇಶದಲ್ಲಿರುವ ಗ್ರಾಮ ಪಂಚಾಯತ್‌ಗೆ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ‌ ಸದಸ್ಯರೊಬ್ಬರಿಗೆ ಬಿಜೆಪಿಗೆ ಬಂದರೆ, ಪಂಚಾಯತ್‌ ಅಧ್ಯಕ್ಷ ಸ್ಥಾನ ಕೊಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಮಿಷವೊಡ್ಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸುಮಾರು ಮೂರುವರೆ ನಿಮಿಷವಿರುವ ಈ ಆಡಿಯೋದಲ್ಲಿ ಬಿ.ಸುರೇಶ್ ಗೌಡ ಗ್ರಾಮ ಪಂಚಾಯ್ತಿ ಸದಸ್ಯ ರವಿ ಎಂಬುವರೊಂದಿಗೆ ಮಾತನಾಡಿರುವುದು ತಿಳಿದುಬರುತ್ತದೆ. “ನೀನು ಅಲ್ಲೇನಿರ್ತೀಯಾ, ನಮ್ಮ ಪಕ್ಷಕ್ಕೆ ಬಾ, ಅಲ್ಲಿದ್ರೆ ನೀನು ಏನೂ ಆಗೋಕೆ ಆಗೊಲ್ಲ. ನೀನು ಬಿಜೆಪಿಗೆ ಬಂದ್ರೆ ಅಧ್ಯಕ್ಷ ಆಗ್ತೀಯ. ನಾನು ನಿನಗೆ ಮಾತು ಕೊಡುತ್ತೇನೆ” ಎಂಬ ಸಂಭಾಷಣೆ ಆಡಿಯೋದಲ್ಲಿದೆ.

ಮುಂದೆ ವಿಷಯ ನಾಸಿರ್ ಎಂಬುವರ ಕಡೆ ಹೊರಳುತ್ತದೆ. “ಆ ಸಾಬಿ ಇದಾನಲ್ಲ, ಅವನೆಸರು ಏನೇಳು? ಅದೇನಪ್ಪ ಅವನು, ನಾಸಿರ್. ಅವ್ನು ಕುಮಾರಸ್ವಾಮಿ ಗೊತ್ತು, ರೇವಣ್ಣ ಗೊತ್ತು, ದೇವೇಗೌಡ ಗೊತ್ತ ಅಂತ ನಿಮ್ಮ ಶಾಸಕ ಅವ್ನಲ್ಲ, ಅವ್ನು ಮಾತು ಕೇಳ್ತನಲ್ಲ ನಾಸಿರ್, ಅವ್ನು ಇರೋವರೆಗೂ ನೀನು ಏನೂ ಆಗೋಕೆ ಬಿಡಲ್ಲ. ಸುಮ್ನೆ ಬಂದು ಬಿಡು. ನೀನು ಅಧ್ಯಕ್ಷ ಆಗ್ತೀಯಾ” ಎಂದು ಆಮಿಷ ನೀಡಲಾಗಿದೆ.

“ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಬೆಂಬಲಿತ ಶೇಖರ್ ಅನ್ನೋರಿಗೆ ಓಟು ಹಾಕಬೇಡಿ. ಅವ್ನು ಸೋಲ್ತಾನೆ ಅಂತ ಹೇಳಿದ್ದೆ. ಸೀಕ್ರೇಟ್ ಅಂದ್ರೆ ಸೀಕ್ರೇಟ್. ಅದು ಎಲ್ಲೂ ಹೇಳ್ಕೊಬ್ಯಾಡ್ರಿ. ನಾನೇ ಶೇಖರ್ ನನ್ನ ಸೋಲ್ಸಿದೆ ಅಂತಾ ಗೊತ್ತಾದ್ರೆ, ಊರಾಕೆ ಬರೋಕಾಗುತ್ತ, ಮರ್ಯಾದೆ ಹೋಗುತ್ತೆ. ಒಂದ್ ಕೆಲ್ಸ ಮಾಡು ನಮ್ಮ ಕಡೆ ಬಂದು ಬಿಡು ಸಹಾಯ ಮಾಡ್ತೀನಿ. ಅಧ್ಯಕ್ಷನು ಆಗ್ತೀಯ. ನಂಬಿಕೆ ಇದ್ರೆ ಬಾ, ಗೊತ್ತಾಯ್ತ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾಗಿ ವೈರಲ್ ಆಗಿದೆ.

ಇದನ್ನೂ ಓದಿ: ದೇಶದಲ್ಲಿ 35 ಸಾವಿರ ದೇವಾಲಯ ನಿರ್ಮಿಸಿ ಎಂದ SL ಭೈರಪ್ಪ: ಆಲಯ ಬಿಡು, ಬಯಲಿಗೆ ಬಾ ಎಂದ ನೆಟ್ಟಿಗರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights