ಕರ್ನಾಟಕದ ಕಾಫಿಡೇ ಕಂಪನಿಯು ಟಾಟಾ ಸಮೂಹದ ಕೈ ಸೇರುವ ಸಾಧ್ಯತೆ!

ಕರ್ನಾಟಕದ ಸುಪ್ರಸಿದ್ದ ಕಾಫಿಡೇ ಕಂಪನಿಯು ಟಾಟಾ ಸಮೂಹದ ಕೈ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಾಫಿಡೇ ಸಂಸ್ಥಾಪಕ ಸಿದ್ಧರ್ಥ್‌ ಆತ್ಮಹತ್ಯೆ ಮಾಡಿಕೊಂಡ ನಂತರ ಅನಾಥ ಸ್ಥಿತಿ ತಲುಪಿರುವ ಕಾಫಿಡೇ ಕಂಪನಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಟಾಟಾ ಗ್ರೂಪ್‌ ಆಫ್‌ ಕಂಪನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಕಾಫಿಡೇ ಕಂಪನಿಯು 12,000 ಹೆಕ್ಟೇರ್‌ ಕಾಫಿ ತೋಟವನ್ನು ಹೊಂದಿದ್ದು, ನೆರೆಯ ರಾಜ್ಯಗಳಲ್ಲಿಯೂ ಸಾಕಷ್ಟು ಕಾಫಿ ತೋಟವನ್ನು ಹೊಂದಿದೆ. ಅಲ್ಲದೆ, ಹಲವಾರು ಕಾಫಿ ಮಾರಾಟ ಅಂಗಡಿ (ಕಾಫಿಡೇ ಅಂಗಡಿ)ಗಳನ್ನು ಹೊಂದಿದೆ.

ಕಾಫಿಡೇಗೆ ಸೇರಿದ ಒಟ್ಟು ಕಾಫಿ ತೋಟಗಳಿಂದ ವರ್ಷಕ್ಕೆ ಸುಮಾರು 20 ಸಾವಿರ ಟನ್ ಕಾಫಿ ಉತ್ಪಾದನೆ ಮಾಡುತ್ತಿದ್ದು, ಕಾಫಿ ತೋಟಗಳಲ್ಲಿ ಸುಮಾರು 3 ಸಾವಿರ ಮಂದಿಗೆ ಉದ್ಯೋಗ ನೀಡಿದೆ.

ಕಾಫಿಡೇಗೆ ಸೇರಿದ ಈ ಎಲ್ಲಾ ಆಸ್ತಿಯನ್ನು ಖರೀದಿಸಲು ಟಾಟಾ ಕಂಪನಿ ಯೋಚನೆ ನಡೆಸಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಕಾಫಿಡೇಯ ಇಡೀ ವಹಿವಾಟನ್ನು ಟಾಟಾ ಸಂಸ್ಥೆ 1500 ಕೋಟಿ ರೂಗಳಿಗೆ ಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ರಫೇಲ್‌ ಯುದ್ದ ವಿಮಾನಕ್ಕೆ ಮಹಿಳಾ ಸಾರಥಿ: ಮೊದಲ ಪೈಲಟ್‌ಆಗಿ ಶಿವಾಂಗಿ ನೇಮಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights