BJPಯಲ್ಲಿ ಹಿರಿಯರು – ಕಿರಿಯರ ನಡುವೆ ಘರ್ಷಣೆ; ಬಿಜೆಪಿ ಕಚೇರಿ ದ್ವಂಸ

ಗುರುವಾರ ನಡೆದ ಸಭೆಯಲ್ಲಿ ಬಿಜೆಪಿಯ ಹಿರಿಯರು ಮತ್ತು ಕಿರಿಯರ ನಡುವೆ ಸಂಘರ್ಷ ನಡೆದಿದೆ. ಈ ವೇಳೆ, ಎರಡು ಮಿನಿ ಟ್ರಕ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಿಜೆಪಿ ಕಚೇರಿಯನ್ನು ಧ್ವಂಸ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲುತೂರಾಟ ನಡೆದಿದ್ದು, ಸ್ಥಳೀಯ ಬಿಜೆಪಿ ನಾಯಕರು ಮತ್ತು ಹಿರಿಯ ನಾಯಕರು ಇತರ ಪಕ್ಷಗಳಿಂದ ಪಕ್ಷಕ್ಕೆ ಸೇರುತ್ತಿರುವ ಯುವ ನಾಯಕರ ಪ್ರವೇಶವನ್ನು ಕಡೆಗಣಿಸುತ್ತಿದ್ದಾರೆ. ಯುವನಾಯಕ ಪ್ರವೇಶವು ತಮ್ಮನ್ನು ಸೈಡ್‌ಲೈನ್‌ ಮಾಡುತ್ತದೆ ಎಂದು ಹಿರಿಯರು ಭಾವಿಸುತ್ತಿದ್ದಾರೆ. ಹೀಗಾಗಿ ಘಟನೆ ನಡೆದಿದೆ ಎಂದು ಹೇಳಲಾಗಿದೆ.

“ಪಕ್ಷದಲ್ಲಿ ಕೆಲವು ಹಳೆಯ ನಾಯಕರಿಗೆ ಸರಿಯಾದ ಗೌರವವನ್ನು ನೀಡಲಾಗುವುದಿಲ್ಲ ಎಂದು ದೂರು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಮಾತುಗಳನ್ನು ಕೇಳುವ ಬದಲು ಪಕ್ಷದ ಕಾರ್ಯಕರ್ತರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ” ಎಂದು ಸಭೆಯಲ್ಲಿ ಹಿರಿಯ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಬಂಗಾಳದಲ್ಲಿ ಮಮತಾ; ತಮಿಳಲ್ಲಿ ಸ್ಟ್ಯಾಲಿನ್‌ಗೆ‌ ಅಧಿಕಾರ; BJPಗೆ ಮುಖಭಂಗ?

ಬುರ್ದ್ವಾನ್ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದಾಗ ಮಾತಿಗೆ ಮಾತು ಬೆಳೆದ ಘರ್ಷಣೆ ನಡೆಸಿದೆ. ಒಂದು ಗುಂಪಿನ ಸದಸ್ಯರು ಸಭೆಯ ಮಧ್ಯದಲ್ಲೇ ಹೊರ ನಡೆದಿದ್ದು, ಕಚೇರಿಯ ಹೊರಗೆ ನಿಲ್ಲಿಸಿದ್ದ ಎರಡು ಮಿನಿ ಟ್ರಕ್‌ಗಳನ್ನು ಸುಟ್ಟು,. ಕಿಟಕಿಗಳನ್ನು ಒಡೆದು, ಕಚೇರಿ ಮೇಲೆ ಕಲ್ಲುತೂರಟ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ತಂಡ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.  ಆಡಳಿತ ಪಕ್ಷವು ಈ ಆರೋಪವನ್ನು ನಿರಾಕರಿಸಿದ್ದು, ಇದು ಬಿಜೆಪಿ ಒಳಗಿನ ಅಸಮಾಧಾನದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

“ನಮ್ಮ ಪಕ್ಷದ ಯಾವುದೇ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ, ನಮ್ಮ ಪಕ್ಷದ ಇಮೇಜ್‌ ಹಾಳುಗೆಡವಲು ಟಿಎಂಸಿ ನಾಯಕರು ಸಂಚು ನಡೆಸಿದ್ದಾರೆ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

“ಬಿಜೆಪಿಯ ಎರಡು ಬಣಗಳು – ಹಳೆಯ ಮತ್ತು ಹೊಸ ಕಾರ್ಯಕರ್ತರು  ಪರಸ್ಪರ ವಿರುದ್ಧವಾಗಿದ್ದಾರೆ …. ನಾವು ಅಲ್ಲಿಗೆ ಹೋಗಿ ಅವರ ಪಕ್ಷದ ಕಚೇರಿಗಳ ಮೇಲೆ ಏಕೆ ದಾಳಿ ಮಾಡುತ್ತೇವೆ? ನಮಗೆ ಬೇರೆ ಏನೂ ಇಲ್ಲವೇ? ” ಎಂದು ಬಿರ್ಭುಮ್‌ನ ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಾಲ್ ಹೇಳಿದ್ದಾರೆ.

ಇದನ್ನೂ ಓದಿ: ಸುವೇಂದು ಅಧಿಕಾರಿ ರ‍್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ: ಮೂವರು BJP ಮುಖಂಡರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights