ನಗರದ ಮಳೆಗೆ ಜನರ ಜೀವನ ತತ್ತರ : ಅನ್ನದ ಕುಕ್ಕರ್ ನಲ್ಲಿ ಮೋರಿ ನೀರು : ಕಂಗಾಲಾದ ಜನ!

ಬೆಂಗಳೂರಿನ ಆರ್ ಆರ್ ನಗರದ ಕೆಂಚೇನಹಳ್ಳಿಯಲ್ಲಿ ಮಳೆ ನೀರಿನಿಂದಾಗಿ ಜನ ಪರದಾಡುವಂತಾಗಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಜನ ಕಂಗಾಲಾಗಿ ಹೋಗಿದ್ದಾರೆ.

ನಿನ್ನೆ ರಾಜ್ಯ ರಾಜಧಾನಿಯಲ್ಲಿ ವರುಣನ ಅರ್ಭಟಕ್ಕೆ ಜನ ಹೈರಾಣಾಗಿದ್ಧಾರೆ. ಅಧಿಕ ಮಳೆಯಿಂದಾಗಿ ಏಕಾಏಕಿ ಮನೆಯೊಳಗೆ ರಾಜಕಾಲುವೆ ನೀರು ನುಗ್ಗಿದ್ದು ಅನ್ನದ ಕುಕ್ಕರ್ ಗೆ ನೀರು ಸೇರಿಕೊಂಡು ಊಟಕ್ಕೆ ಕುಳಿತವರು ಕಣ್ಣೀರಾಕಿದ್ದಾರೆ. ರಾತ್ರಿ 10 ಗಂಟೆಗೆ ಮನೆಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ.

ಚಿಕ್ಕವರಿಂದ ವಯಸ್ಸಾದವರವರೆಗೆ ರಕ್ಕಸ ಮಳೆಯ ಹೊಡೆತಕ್ಕೆ ರಾತ್ರಿ ಇಡೀ ನಿದ್ದೆ ಇಲ್ಲದೆ ಕುಳಿತಿದ್ದಾರೆ. ರಾತ್ರಿ ಊಟ ಮಾಡದೆ ಮಲಗಿದ್ದಾರೆ. ಜನ ಜಾನುವಾರುಗಳ ಪ್ರಾಣ ಉಳಿಸಿಕೊಳ್ಳಲು ಹರಸಾಹಸವೇ ಪಟ್ಟಿದ್ದಾರೆ. ಆದರೂ ಕೆಲವೆಡೆ ಜಾನುವಾರುಗಳು ಸಾವನ್ನಪ್ಪಿರುವ ವರದಿಗಳಾಗಿವೆ.

ಮನೆಯಲ್ಲಿ ಚರಂಡಿ ನೀರು, ಕೆಸರು, ವಾಸನೆಯಲ್ಲಿ ಜನ ದಿನ ಕಳೆದಿದ್ದಾರೆ. ರಾತ್ರಿಯಿಡಿ ತಾವು ಅನುಭವಿಸಿದ ಸಮಸ್ಯೆಯನ್ನು ಸುದ್ದಿರಾರರ ಬಳಿ ತೋಡಿಕೊಂಡಿದ್ದಾರೆ. ಕೂಡಲೇ ತಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕೆಂಚೇನಹಳ್ಳಿ ಸ್ಥಳೀಯರು ಮನವಿ ಮಾಡಿದ್ದಾರೆ.

 ರಾಜಕಾಲುವೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾನ್ನಪ್ಪಿವೆ. ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಜಾನುವಾರು ಮೃತಪಟ್ಟಿವೆ.

ಇನ್ನೂ ಭಾರೀ ಮಳೆಗೆ ರಸ್ತೆಗಳು ನದಿಗಳಂತಾಗಿ ವಾಹಸ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಡಿಗಿಂತಲೂ ನನೀರು ರಸ್ತೆಯ ಮೇಲೆ ನಿಂತಿದ್ದರಿಂದ ವಾಹನ ಸಂಚಾರ ಕಷ್ಟವಾಗಿ ಜನ ವಾಹನಗಳನ್ನು ಅಲ್ಲಲ್ಲೇ ನಿಲ್ಲಿಸಿ ತೆರಳಿದ್ದು ಹಲವೆಡೆ ಕಂಡು ಬಂದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನಗಳು ನೀರಿನಲ್ಲಿ ಮುಳುಗಿವೆ.

ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವ್ಯಕ್ತಿಯೊಬ್ಬ ಈಜಿದ್ದಾನೆ.

ಭಾರಿ ಮಳೆಯಿಂದ ಮಲ್ಲತ್ತಹಳ್ಳಿ ಕೆರೆಯಂತಾಗಿದೆ. ಮಳೆಯಿಂದ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ.

ಆರ್.ಆರ್.ನಗರದ ಪ್ರಮೋದ್ ಲೇಔಟ್ಗೆ ನೀರು ನುಗ್ಗಿದೆ. 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹಲವೆಡೆ ನೀರಿನಲ್ಲಿ ಬೈಕ್, ಕಾರುಗಳು ಕೊಚ್ಚಿ ಹೋಗಿವೆ.

ಮಳೆ ನೀರಿನ ಮಧ್ಯೆ ಬೈಕ್ ಸವಾರರು ಚಲಾಯಿಸಿದ್ದಾರೆ

ತಡರಾತ್ರಿ ಸುರಿದ ಭಾರಿ ಮಳೆಗೆ ಜೆ.ಸಿ.ನಗರ, ಸಂಪಂಗಿರಾಮನಗರದಲ್ಲಿ ನೀರು ಮನೆಗೆ ನುಗ್ಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights