ಸಿನಿಪ್ರಿಯರಿಗೆ ಸಿಹಿ ಸುದ್ದಿ: ಸೋಮವಾರದಿಂದ ಥಿಯೇಟರ್‌ಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಕ್ಕೆ ಅವಕಾಶ!

ಕೊರೊನಾ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಥಿಯೇಟರ್‌ಗಳಲ್ಲಿ ಹಲವು ನಿಬಂದಗಳೊಂದಿಗೆ ಕೆಲವು ತಿಂಗಳ ಹಿಂದೆಯಷ್ಟೇ ತೆರೆದಿದ್ದವು. ಅವುಗಳಲ್ಲಿ 30% ಸೀಟು ಭರ್ತಿಗಷ್ಟೇ ಅವಕಾಶ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಮೊತ್ತೊಮ್ಮೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಥಿಯೇಟರ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಒಳಗೊಳ್ಳಲು ಅವಕಾಶ ನೀಡಲಾಗಿದೆ.

ಫೆಬ್ರವರಿ 01 ರಿಂದ ಚಿತ್ರಮಂದಿರಗಳಲ್ಲಿ ಎಷ್ಟು ಆಸಗಳಿರುತ್ತವೆಯೂ ಅಷ್ಟೋ ಪ್ರಕ್ಷಕರಿಗೆ ಟಿಕೆಟ್‌ ನೀಡಬಹುದು ಎಂದು ಥಿಯೇಟರ್‌ಗಳಿಗೆ ಅವಕಾಶ ನೀಡಲಾಗಿದೆ. ಕೆಲವು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಚಿತ್ರಮಂದಿರದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಹೊಂದಬಹುದು ಎಂದ ಹೇಳಲಾಗಿದೆ.

ಎಲ್ಲಾ ಸಿನೆಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳಲ್ಲಿಯೂ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸೇಷನ್ ಗಳ ನಿರ್ವಹಣೆಯನ್ನು ಮುಂದುವರೆಸಬೇಕು. ಅಂತೆಯೇ ‘ಆರೋಗ್ಯ ಸೇತು ಆಪ್’ ಕಡ್ಡಾಯ ಬಳಕೆ, ಪ್ರವೇಶ-ನಿರ್ಗಮನ ಹಂತದಲ್ಲಿ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಕೋವಿಡ್-19 ಪ್ರೋಟೋಕಾಲ್ ಅನ್ನು ಪಾಲಿಸಬೇಕು ಎಂದು ಹೇಳಲಾಗಿದೆ.

ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಹಾರ ಮತ್ತು ಪಾನೀಯಗಳ ಮಾರಾಟವನ್ನು ನಿರ್ವಹಿಸಬೇಕು. ಅಲ್ಲದೆ, ಟಿಕೆಟ್‌ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಮಾಡುವ ಸಂದರ್ಭದಲ್ಲಿ ಸಂಪರ್ಕ ಸಂಖ್ಯೆಯನ್ನು ಪಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಸಭಾ ಮರ್ಯಾದೆ ಉಲ್ಲಂಘಿಸಿದ ಸುವರ್ಣ ನ್ಯೂಸ್‌: ವರದಿಗಾರರನ್ನು ಹೊರಗಟ್ಟಿದ ಹೋರಾಟಗಾರರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights