ಅ.16ಕ್ಕೆ ಚಿರು ಕೊನೆಯ ಚಿತ್ರ ‘ಶಿವಾರ್ಜುನ’ ಮರು ಬಿಡುಗಡೆ : ಮೇಘನಾ ರಾಜ್ ಟ್ವೀಟ್!

ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ಶಿವರ್ಜುನ ಅಕ್ಟೋಬರ್ 16 ರಂದು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  ಹೃದಯ ಸ್ತಂಭನದಿಂದಾಗಿ ಜೂನ್ 7 ರಂದು ನಿಧನ ಹೊಂದಿದ ಚಿರು ಅವರ ಕೊನೆಯ ಚಿತ್ರ ಶಿವರ್ಜುನ. ಅನ್ಲಾಕ್ 5.0 ಮಾರ್ಗಸೂಚಿಗಳ ಪ್ರಕಾರ, ಕರ್ನಾಟಕದ ಸಿನೆಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಅಕ್ಟೋಬರ್ 15 ರಿಂದ ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ತೆರೆಯಲಿವೆ. ಆರಂಭದಲ್ಲಿ, ಪ್ರದರ್ಶಕರು ಹಳೆಯ ಬ್ಲಾಕ್‌ಬಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಏಳು ತಿಂಗಳ ನಂತರ ಕರ್ನಾಟಕದಲ್ಲಿ ಮರು ಬಿಡುಗಡೆಯಾದ ಮೊದಲ ಚಿತ್ರ ಶಿವರ್ಜುನ. ಆದರೆ ಈ ಸಿನಿಮಾ ಬಿಡುಗಡೆಯಾದ ಸಂದರ್ಭ ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಘೋಷಿಸಲಾಯಿತು. ಹೀಗಾಗಿ ಸಿನಿಮಾ ನೋಡಲು ನಿರೀಕ್ಷಿತ ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಚಿರು ಸಿನಿಮಾ ರೀ ರಿಲೀಸ್ ಗೆ ನಿರ್ಧರಿಸಲಾಗಿದೆ. ಗರ್ಭಿಣಿ ಮೇಘನಾ ರಾಜ್ ಚಿರು ಸಿನಿಮಾ ಮರು ಬಿಡುಗಡೆಗೆ ಮುಂದಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಸಂತೋಷದಿಂದ ಮೇಘನಾ ಹಂಚಿಕೊಂಡಿದ್ದಾರೆ.

ಪೋಸ್ಟ್ ಇಲ್ಲಿದೆ:

ನಟ-ಪತಿ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಾಗ ಮೇಘನಾ ರಾಜ್ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಅವರು ಮುಂದಿನ ವಾರಗಳಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಕೆಲವು ದಿನಗಳ ಹಿಂದೆ ಆಕೆಯ ಕುಟುಂಬ ಮತ್ತು ಸ್ನೇಹಿತರು ಸೀಮಂತ ಕಾರ್ಯವನ್ನು ಆಯೋಜಿಸಿದ್ದರು.

ಶಿವರ್ಜುನ ಅಲ್ಲದೆ ಅಮೃತ ಅಯ್ಯಂಗಾರ್, ರಚನಾ ಇಂದರ್, ಅಭಿಲಾಶ್ , ಲವ್ ಮೋಕ್‌ಟೇಲ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಲವ್ ಮೋಕ್‌ಟೇಲ್ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ.

ಆರಂಭದಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಪ್ರೇಕ್ಷಕರ ಆಸಕ್ತಿಯನ್ನು ನೋಡಲು ನಿರ್ಮಾಪಕರು ಮತ್ತು ವಿತರಕರು ಹಳೆಯ ಚಲನಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಿದ್ದಾರೆ. ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಧರಿಸುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights