ಕಾಬೂಲ್ ನಲ್ಲಿ ತಾಲಿಬಾನ್ ಉಗ್ರರ ಗುಂಡೇಟಿಗೆ 17 ಮಕ್ಕಳು ಬಲಿ…!

ಕಾಬೂಲ್ ನಲ್ಲಿ ತಾಲಿಬಾನ್ ಉಗ್ರರ ಗುಂಡೇಟಿಗೆ 17 ಮಕ್ಕಳು ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

ಸ್ಥಳೀಯ ಅಫಘಾನ್ ಸುದ್ದಿ ಸಂಸ್ಥೆ ಅಶ್ವಕ ಪ್ರಕಾರ, ಶುಕ್ರವಾರ ರಾತ್ರಿ ತಾಲಿಬಾನ್ ಉಗ್ರರ ವೈಮಾನಿಕ ಗುಂಡಿನ ದಾಳಿಯಿಂದ ಕಾಬೂಲ್ ಮತ್ತು ಸುತ್ತಮುತ್ತ ಕನಿಷ್ಠ 17 ಮಕ್ಕಳು ಸಾವನ್ನಪ್ಪಿದ್ದು ಮಕ್ಕಳು ಸೇರಿದಂತೆ 41 ಮಂದಿ ಗಾಯಗೊಂಡಿದ್ದಾರೆ.

ಪಂಜಶೀರ್ ಕಣಿವೆಯ ಮೇಲೆ ತಾಲಿಬಾನಿಗಳು ತಮ್ಮ ನಿಯಂತ್ರಣವನ್ನು ಪಡೆದುಕೊಂಡಿದ್ದು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧವನ್ನು (NRFA) ಸೋಲಿಸಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಇದರ ಬಳಿಕ ಶುಕ್ರವಾರ ಕಾಬೂಲ್‌ನಾದ್ಯಂತ ಭಾರೀ ಸಂಭ್ರಮದ ಗುಂಡಿನ ಸದ್ದು ಕೇಳಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸಂಸ್ಥೆ ಅಶ್ವಕ ಹಂಚಿಕೊಂಡಿರುವ ಫೋಟೋಗಳು ಮತ್ತು ವೀಡಿಯೋಗಳಲ್ಲಿ ಜನರು ಗಾಯಗೊಂಡ ತಮ್ಮ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ.

“ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ, ನಾವು ಇಡೀ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಹೊಂದಿದ್ದೇವೆ. ಪಂಜಶೀರ್ ಈಗ ನಮ್ಮ ನೇತೃತ್ವದಲ್ಲಿದೆ” ಎಂದು ತಾಲಿಬಾನ್ ಕಮಾಂಡರ್ ಓರ್ವ ಹೇಳಿರುವುದಾಗಿ ಸುದ್ದಿ ಸಂಸ್ಥೆ ಅಶ್ವಕ ಉಲ್ಲೇಖಿಸಿದೆ.

ನಿನ್ನೆ ರಾತ್ರಿ ಕಾಬೂಲ್‌ನ ನಗರದಾದ್ಯಂತ ವೈಮಾನಿಕ ಗುಂಡಿನ ದಾಳಿಯಿಂದಾಗಿ ಕನಿಷ್ಠ 17 ದೇಹಗಳು ಪತ್ತೆಯಾಗಿವೆ. 41 ಗಾಯಾಳುಗಳನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದೆ. ಗಾಯಗೊಂಡ ಮತ್ತು ಸತ್ತವರನ್ನು ಗಡಿಭಾಗದ ನಂಗರ್‌ಹಾರ್ ಪ್ರಾಂತ್ಯದಿಂದ ಕರೆತರಲಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

ಆದಾಗ್ಯೂ ಪಂಜಶೀರ್‌ನಲ್ಲಿನ ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್, ‘ಪಂಜಶೀರ್ ವಿಜಯದ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಪಂಜಶೀರ್ ವಿಜಯದ ಸುದ್ದಿಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಸುಳ್ಳು’ ಎಂದಿದ್ದಾರೆ.

ಪದಚ್ಯುತ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಪುತ್ರ ಎಬಾದುಲ್ಲಾ ಸಲೇಹ್ ಕೂಡ ಪಂಜಶೀರ್ ವಿರುದ್ಧ ತಾಲಿಬಾನ್ ಗೆಲುವಿನ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

ಪಂಜ್‌ಶಿರ್‌ನಲ್ಲಿನ ಪ್ರತಿರೋಧ ಪಡೆಗಳ ನಾಯಕರಲ್ಲಿ ಒಬ್ಬರಾದ ಅಮರುಲ್ಲಾ ಸಲೇಹ್ ಅವರು ಸ್ವತಃ ಅಫ್ಘಾನಿಸ್ತಾನದಿಂದ ಪಲಾಯನ ಮಾಡುವ ವೇಳೆ ಗಾಳಿಯನ್ನು ಗುಂಡು ಹಾರಿಸುವ ಸದ್ದು ಹೇಳಿಬಂದಿದೆ. ಅಮರುಲ್ಲಾ ಅವರು ಪಂಜಶೀರ್ ಕಣಿವೆಯಲ್ಲಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಅಮರುಲ್ಲಾ ಟೊಲೋ ನ್ಯೂಸ್‌ಗೆ ತಿಳಿಸಿದ್ದಾರೆನ್ನಲಾಗುತ್ತಿದೆ.

“ನಾನು ನಮ್ಮ ಕಮಾಂಡರ್‌ಗಳು ಮತ್ತು ನಮ್ಮ ರಾಜಕೀಯ ನಾಯಕರೊಂದಿಗೆ ಇದ್ದೇನೆ ಮತ್ತು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇನೆ. ಖಂಡಿತವಾಗಿಯೂ ಇದು ಕಷ್ಟಕರ ಪರಿಸ್ಥಿತಿ, ನಾವು ತಾಲಿಬಾನ್ ಮತ್ತು ಪಾಕಿಸ್ತಾನಿಗಳು ಮತ್ತು ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಗುಂಪುಗಳ ಆಕ್ರಮಣಕ್ಕೆ ಒಳಗಾಗಿದ್ದೇವೆ” ಎಂದು ಅಮರುಲ್ಲಾ ಸಲೇಹ್ ಹೇಳಿದ್ದಾರೆನ್ನಲಾಗುತ್ತಿದೆ.

ಈ ವಾರವಿಡೀ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಪ್ರತಿರೋಧದ ಗುಂಡಿನ ಚಕಮಕಿ ವರದಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights