ಒಂದೇ ಪಾದದಲ್ಲಿ ಒಂಬತ್ತು ಬೆಳರುಗಳನ್ನು ಹೊಂದಿರುವ ಮಗು ಜನನ; ದೇವರ ಕೊಡುಗೆ ಎಂದ ಕುಟುಂಬ!

ಎಡಗಾಲಿನಲ್ಲಿ ಒಂಬತ್ತು ಕಾಲ್ಬೆರಳುಗಳನ್ನು ಹೊಂದಿರುವ ಗಂಡು ಮಗು ಗಂಗಾವತಿಯಲ್ಲಿ ಜನಿಸಿದೆ. ಇದನ್ನು ವೈದ್ಯಕೀಯ ಪವಾಡ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ ಎಂದು ಕರೆಯಬಹುದು ಎಂದು ವೈದ್ಯರು ಹೇಳಿದ್ದಾರೆ.

ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಹಲವಾರು ಶಿಶುಗಳು ಹೆಚ್ಚುವರಿ ಬೆರಳುಗಳು ಅಥವಾ ಕಾಲ್ಬೆರಳುಗಳೊಂದಿಗೆ ಜನಿಸುತ್ತವೆ. ಆದರೆ ಈ ಮಗುವಿಗೆ ಒಂದೇ ಪಾದದಲ್ಲಿ ಒಂಬತ್ತು ಕಾಲ್ಬೆರಳುಗಳಿವೆ. ಶಿಶುಗಳು ಬೆಳೆದಂತೆ ಹೆಚ್ಚುವರಿ ಕಾಲ್ಬೆರಳುಗಳೊಂದಿಗೆ ನಡೆದಾಡಲು ಹೊಂದಿಕೊಳ್ಳುತ್ತಾರೆ ಎಂದು ಬಳ್ಳಾರಿಯ ಮಕ್ಕಳ ತಜ್ಞ ಡಾ. ಟಿ ಪ್ರಿಸ್ಸಿಲ್ಲಾ ತಿಳಿಸಿದ್ದಾರೆ.

ಇದು ಅಪರೂಪದ್ದಾಗಿದೆ. ನವಜಾತ ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೆರಿಗೆ ಮಾಡಿದ ಡಾ.ಬಾಲಚಂದ್ರನ್ ಹೇಳಿದ್ದಾರೆ.

“ಪಾಲಿಡಾಕ್ಟಲಿ ಬಗ್ಗೆ ಕುಟುಂಬಕ್ಕೆ ಅರ್ಥವಾಗುವಂತೆ ನಾವು ಹಿಂದಿನ ಪ್ರಕರಣಗಳು ಮತ್ತು ದಾಖಲೆಗಳನ್ನು ವಿವರಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಕುಟುಂಬದ ಹಲವಾರು ಹಿರಿಯರು ಇದು ದೇವರ ಕೊಡುಗೆ ಎಂದು ಹೇಳಿದ್ದಾರೆ. ಮಗು ಮತ್ತು ತಾಯಿಯ ಯೋಗಕ್ಷೇಮಕ್ಕಾಗಿ ವೈದ್ಯರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ: ಜಮೀನಿನಲ್ಲಿ ಸಿಕ್ಕಿತು ವಜ್ರ; ಒಂದೇ ದಿನದಲ್ಲಿ ಕೊಟ್ಯಾಧಿಪತಿಯಾದ ರೈತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights