ಮಗುವಿನ ಮೇಲೆ ಅತ್ಯಾಚಾರ: ಆರೋಪಿಗೆ ಮರಣ ದಂಡನೆ ವಿಧಿಸಿದ ವಿಶೇಷ ಪೋಸ್ಕೋ ನ್ಯಾಯಾಲಯ

ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಎಳೆ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಪ್ರಕರಣದ ಅಪರಾಧಿಗೆ ವಿಶೇಷ ಪೋಸ್ಕೋ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದು, ಮಹತ್ವದ ತೀರ್ಪು ನೀಡಿದೆ.

ಅಕ್ಟೋಬರ್ 19ರಂದು ಎರಡೂವರೆ ವರ್ಷದ ಅಪ್ರಾಪ್ತ ಬಾಲಕಿಯ ಮೃತ ದೇಹ ಗಾಝಿಯಾಬಾದ್ ನ ಕವಿ ನಗರ ಪ್ರದೇಶದ ರಸ್ತೆಬದಿಯ ಪೊದೆಯಲ್ಲಿ ಕಂಡುಬಂದಿತ್ತು. ಪ್ರಕರಣ ವಿಚಾರಣೆ ಆರಂಭಸಿದ್ದ ನ್ಯಾಯಾಲಯವು, 29 ದಿನಗಳಲ್ಲಿ ಪ್ರಕರಣದ ವಿಚಾರಣೆಯನ್ನು ಮುಗಿಸಿದ್ದು, ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ವಿಶೇಷ ಪೋಸ್ಕೊ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಶ್ರೀವಾಸ್ತವ ಅವರು ಆರೋಪಿ ಚಂದನ್‍ಗೆ ಮರಣ ದಂಡನೆ ವಿಧಿಸಿದರು. ಆರೋಪಿಯು ಬಾಲಕಿಯ ತಂದೆಯ ಆತ್ಮೀಯ ಸ್ನೇಹಿತನಾಗಿದ್ದ. ತೀರ್ಪು ನೀಡುವ ಮೊದಲು 10 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಕೃತ್ಯ ನಡೆದ ತಕ್ಷಣವೇ ಆರೋಪಿಯನ್ನು ಬಂಧಿಸಲಾಗಿತ್ತು. ಡಿ.29ರಂದು ಚಾರ್ಜ್ ಶೀಟ್ ದಾಖಲಿಸಲಾಗಿತ್ತು ಎಂದು ಪೊಲೀಸ್ ಉಪ ಅಧೀಕ್ಷಕ ಅವಿನಾಶ್ ಕುಮಾರ್ ಹೇಳಿದ್ದಾರೆ.

ಅ.19ರಂದು ಸಂತ್ರಸ್ತ ಕುಟುಂಬದವರು ಕವಿನಗರ ಪೊಲೀಸ್ ಠಾಣೆಯಲ್ಲಿ ಮಗು ನಾಪತ್ತೆಯಾಗಿರುವುದಾಗಿ ದೂರು ಸಲ್ಲಿಸಿದ್ದರು. ಕುಟುಂಬ ಸದಸ್ಯರ ಅನುಮಾನದ ಮೇರೆಗೆ ಪೊಲೀಸರು ಚಂದನ್ ಪಾಂಡೆಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: 05 ದಿನದಲ್ಲಿ 13 ಬಾರಿ ಸಾಮೂಹಿಕ ಅತ್ಯಾಚಾರ; 09 ಕಾಮುಕರಿಂದ ಬಾಲಕಿಗೆ ನರಕಯಾತನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights