ಚಂಡೀಗಢ ಪಾಲಿಕೆ ಚುನಾವಣೆ: ಹೆಚ್ಚು ಸ್ಥಾನ ಗೆದ್ದ ಎಎಪಿ; ಅಧಿಕಾರ ಕಳೆದುಕೊಂಡ ಬಿಜೆಪಿ!

ಚಂಡೀಗಢ ಮುನಿಸಿಪಲ್ ಕಾರ್ಪೊರೇಷನ್‌ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಮ್‌ ಆದ್ಮಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಯಾರಿಗೂ ಕನಿಷ್ಟ ಬಹುಮತ ದೊರೆತಿಲ್ಲ.

ಚಂಡೀಗಢ ಪಾಲಿಕೆಯ ಒಟ್ಟು 35 ವಾರ್ಡುಗಳ ಪೈಕಿ 14ರಲ್ಲಿ ಎಎಪಿ ಗೆದ್ದಿದೆ. ಬಿಜೆಪಿ 12, ಕಾಂಗ್ರೆಸ್‌ 8, ಅಕಾಲಿ ದಳವು 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಕಳೆದ ಚುನಾವಣೆಯಲ್ಲಿ 21 ವಾರ್ಡ್‌ಗಳಲ್ಲಿ ಗೆದ್ದು, ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ಕೇವಲ 12 ವಾರ್ಡುಗಳಲ್ಲಿ ಜಯ ಗಳಿಸಿದೆ.

ಕಳೆದ ಬಾರಿ ಚಂಡೀಗಢದಲ್ಲಿ ಒಟ್ಟು 26 ವಾರ್ಡುಗಳಿದ್ದುವ. ಈ ಬಾರಿ ವಾರ್ಡ್‌ಗಳ ಮರು ವಿಂಗಡಣೆ ಮಾಡುವ ಮೂಲಕ ವಾರ್ಡ್‌ಗಳ ಸಂಖ್ಯೆಗಳನ್ನು 35ಕ್ಕೆ ಏರಿಸಲಾಗಿತ್ತು.

ಇಲ್ಲಿ ಅಧಿಕಾರಕ್ಕೇರಬೇಕಿದ್ದರೆ ಎಎಪಿಗೆ 19 ಸದಸ್ಯರ ಬೆಂಬಲ ಬೇಕಿದೆ. ಒಂದು ವೇಳೆ ಎಎಪಿ ಆಡಳಿತ ರಚಿಸಲು ವಿಫಲವಾದರೆ, ಬಿಜೆಪಿಗೆ ಅವಕಾಶವಿದೆ. ಚಂಡೀಗಢದಲ್ಲಿ ಬಿಜೆಪಿ ಸಂಸದರೇ ಇರುವುದರಿಂದ ಬಿಜೆಪಿಗೆ 18 ಸದಸ್ಯರ ಬೆಂಬಲ ಸಾಕಾಗಲಿದೆ. ಸಂಸದರ ಮತವೂ ಗಣನೆಗೆ ಬರಲಿದೆ.

ಸದ್ಯ ಎಎಪಿ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದರಿಂದಾಗಿ ಇತರರ ಬೆಂಬಲ ಅಗತ್ಯವಿದೆ. ಹೀಗಾಗಿ, ಎಎಪಿ ಈಗ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗುವುದೋ ಅಥವಾ ಕಾಂಗ್ರೆಸ್‌ ಜೊತೆ ಹೋಗುವುದೋ ಎಂಬ ಕುತೂಹಲವೂ ಮೂಡಿದೆ.

ಅಲ್ಲದೆ, 2022ರ ಆರಂಭದಲ್ಲಿ ನಡೆಯಲಿರುವ ಪಂಜಾಬ್‌ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ಮುನ್ನುಡಿಯಾಗಲಿದೆ ಎಂದು ಹೇಳಲಾಗಿದೆ.

Also Read: ಛತ್ತೀಸ್‌ಗಡ: ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ; ಬಿಜೆಪಿಗೆ ಭಾರೀ ಹಿನ್ನಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights