ಉತ್ತರಾಖಂಡದಲ್ಲಿ ಮತ್ತೆ ಹಿಮನದಿ ಸ್ಪೋಟ : ಎಂಟು ಜನ ಸಾವು – 384 ಜನರ ರಕ್ಷಣೆ!

ಉತ್ತರಾಖಂಡದ ಸುಮ್ನಾದಿಂದ 4 ಕಿ.ಮೀ ದೂರದಲ್ಲಿ ಹಿಮಪಾತ ಸಂಭವಿಸಿದ ಪರಿಣಾಮ ಎಂಟು ಜನ ಸಾವನ್ನಪ್ಪಿದ್ದಾರೆ. ಇದುವರೆಗೆ 384 ಜನರನ್ನು ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯಚರಣೆ ಮುಮದುವರೆದಿದೆ. ಫೆಬ್ರವರಿಯಲ್ಲಿ ಚಮೋಲಿ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿ ಎರಡು ತಿಂಗಳ ನಂತರ ಈ ಘಟನೆ ನಡೆದಿದೆ.

ಏಪ್ರಿಲ್ 23 ರಂದು ಸಂಜೆ 4 ಗಂಟೆ ಸುಮಾರಿಗೆ ಉತ್ತರಾಖಂಡದ ನಿತಿ ಕಣಿವೆಯ ಬಳಿ ಭಾರೀ ಗಾತ್ರದ ಹಿಮಗಡ್ಡೆ ನದಿಗೆ ಬಿದ್ದ ಪರಿಣಾಮ ಅಪಾರ ಪ್ರಾಣ ಹಾನಿ ಸಂಭವಿಸಿದೆ. ಶನಿವಾರ ಎಂಟು ಶವಗಳನ್ನು ವಶಪಡಿಸಿಕೊಳ್ಳಾಗಿದ್ದು ಈ ಪ್ರದೇಶದ ಗಡಿ ರಸ್ತೆಗಳ ನಿರ್ಮಾಣ ಕೆಲಸ ಮಾಡುತ್ತಿದ್ದ ಸುಮಾರು 384 ಜನರನ್ನು ರಕ್ಷಿಸಲಾಗಿದೆ.

ಕಳೆದ 5 ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತದಿಂದಾಗಿ ರಸ್ತೆ ಸಂಪರ್ಕವಿಲ್ಲದೇ ಈ ಪ್ರದೇಶದ ಜನ ತತ್ತರಿಸಿ ಹೋಗಿದ್ದಾರೆ. ಹಿಮಪಾತ ಸಂಭವಿಸಿದ ವೇಳೆ ಜೋಶಿಮಠ-ಮಲಾರಿ-ಗಿರ್ತಿಡೋಬ್ಲಾ-ಸುಮ್ನಾ- ರಿಮ್ಖಿಮ್ ಅಕ್ಷದ ಉದ್ದಕ್ಕೂ ರಸ್ತೆ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು. ಭಾರತೀಯ ಸೇನೆಯು ತಕ್ಷಣವೇ ಎಚ್ಚೆತ್ತುಕೊಂಡು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 384 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಇತರ ಕಾರ್ಮಿಕರನ್ನು ಪತ್ತೆ ಹಚ್ಚುವ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಶುಕ್ರವಾರ ತಡರಾತ್ರಿಯಿಂದಲೂ ಹಿಮದ ಕೆಳಗೆ ಸಿಲುಕಿರುವ ಜನರನ್ನು ಪತ್ತೆಹಚ್ಚಲು ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ ಬಿಆರ್ಒ ಅಡಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights