ಜಾಗಿಂಗ್ ವೇಳೆ ಗುದ್ದಿದ್ದ ಆಟೋ : ನ್ಯಾಯಾಧೀಶ ಸಾವು – ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸೆರೆ!

ಜಾರ್ಖಂಡ್ ನ್ಯಾಯಾಧೀಶರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆನ್ನುವ ಸುದ್ದಿ ಸದ್ಯ ಸಿಸಿಟಿವಿ ದೃಶ್ಯಾವಳಿಗಳಿಂದ ಸುಳ್ಳಾಗಿದೆ. ನ್ಯಾಯಾಧೀಶರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಬದಲಿಗೆ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.

ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಧನ್ಬಾದ್ನಲ್ಲಿ ಬುಧವಾರ ಬೆಳಿಗ್ಗೆ ಜಾಗಿಂಗ್ ಮಾಡುತ್ತಿದ್ದಾಗ ಅವರ ಮನೆಯಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಜಾರ್ಖಂಡ್ನಲ್ಲಿ ನ್ಯಾಯಾಧೀಶರ ಸಾವು ಹಿಟ್-ಅಂಡ್-ರನ್ ಪ್ರಕರಣ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಈ ಘಟನೆಯ ಸಿಸಿಟಿವಿ ದೃಶ್ಯ ನೋಡಿದ ಮೇಲೆ ಇದೊಂದು ಕೊಲೆ ಎಂದು ಕುಟುಂಬ ದೂರು ದಾಖಲಿಸಿದೆ.

 

ಸಿಸಿಟಿವಿ ದೃಶ್ಯಾವಳಿಗಳು ನ್ಯಾಯಾಧೀಶರು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿರ್ಜನ ರಸ್ತೆಯೊಂದರಲ್ಲಿ ಜಾಗಿಂಗ್ ಮಾಡುವುದನ್ನು ತೋರಿಸುತ್ತದೆ. ಪಕ್ಕದ ರಸ್ತೆಯಿಂದ ತಿರುವು ಪಡೆದುಕೊಂಡ ಆಟೋರಿಕ್ಷಾ ಅವರಿಗೆ ನೇರವಾಗಿ ಗುದ್ದಿ ಮತ್ತದೆ ವೇಗದಲ್ಲಿ ಹೋಗುತ್ತದೆ.

ರಕ್ತಸ್ರಾವವಾಗಿ ಗಂಟೆಗಳವರೆಗೆ ರಸ್ತೆ ಬದಿ ಬಿದ್ದಿದ್ದ ನ್ಯಾಯಾಧೀಶ ಆನಂದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅವರು ಸಾವನ್ನಪ್ಪಿದ್ದರು.

ಬೆಳಿಗ್ಗೆ 7 ಗಂಟೆಗೆ ಆನಂದ್ ಮನೆಗೆ ಹಿಂತಿರುಗದಿದ್ದಾಗ ಕುಟುಂಬಸ್ಥರು ಕಾಣೆಯಾಗಿದ್ದಾರೆಂದು ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಆನಂದ್ ಅವರು ಆಸ್ಪತ್ರೆಗೆ ಕರೆದೊಯ್ದು ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಆಟೋ ಆತನನ್ನು ಉದ್ದೇಶಪೂರ್ವಕವಾಗಿ ಹೊಡೆದಿದೆ ಎಂದು ಸ್ಪಷ್ಟಪಡಿಸುತ್ತವೆ ಎಂದು ಪೊಲೀಸರು ಹೇಳುತ್ತಾರೆ. ನ್ಯಾಯಾಧೀಶರು ಹೊಡೆಯುವ ಕೆಲವೇ ಗಂಟೆಗಳ ಮೊದಲು ಆಟೋವನ್ನು ಕಳವು ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ತನಿಖೆಗಾಗಿ ಅನೇಕ ಕರೆಗಳು ಪೊಲೀಸರಿಗೆ ಬಂದಿವೆ.

ನ್ಯಾಯಾಧೀಶ ಆನಂದ್ ಪ್ರಕರಣಗಳ ಬಗ್ಗೆ ಪೊಲೀಸರು ಗಮನ ಹರಿಸುತ್ತಿದ್ದಾರೆ. ಅವರು ಧನ್ಬಾದ್ ಪಟ್ಟಣದಲ್ಲಿ ಮಾಫಿಯಾ ಹತ್ಯೆಯ ಅನೇಕ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು ಮತ್ತು ಇತ್ತೀಚೆಗೆ ಇಬ್ಬರು ದರೋಡೆಕೋರರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights