ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ; ಸಂಜನಾ ಪೊಲೀಸರ ವಶಕ್ಕೆ!

ಸ್ಯಾಂಡಲ್‌ವುಡ್‌ಗೆ ಅಂಟಿರುವ ಡ್ರಗ್ಸ್‌ ಜಾಲದ ನಂಟು ಹಲವರನ್ನು ಹೊರಗೆಳೆಯುತ್ತಿದೆ. ಕಳೆದ ವಾರದಿಂದ ನಟಿ ಸಂಜನಾಗೂ ಡ್ರಗ್ಸ್‌ ಮಾಫಿಯಾಕ್ಕೂ ನಂಟಿದೆ ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಸಿಸಿಬಿ ಅಧಿಕಾರಿಗಳು ಸಂಜನಾ ಅವರ ಮನೆಯ ಮೇಲೆ ದಾಳಿ ಮಾಡಿದ್ದು, ಸಂಜನಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸಂಜನಾ ಅವರಿಂದ ಅವರ ಮೊಬೈಲನ್ನೂ ಸಹ ವಶಕ್ಕೆ ಪಡೆದಿದ್ದು, ಇಂದಿರಾನಗರದಲ್ಲಿರುವ ಸಂಜನಾ ಅವರ ಫ್ಲ್ಯಾಟ್‌ನಲ್ಲೇ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗಾಗಿ ನಟಿ ಸಂಜನಾಳನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆಯಷ್ಟೇ ಇಂದಿರಾನಗರದಲ್ಲಿರುವ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲಿಯೇ ಇದ್ದು, ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಸಂಜನಾ ಅವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.


ಇದನ್ನೂ ಓದಿ: “ನನ್ನ ಕಚೇರಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ” – ಕಂಗನಾ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights