ನ್ಯಾಯಾಧೀಶರ ಬೆದರಿಕೆ ದೂರುಗಳಿಗೆ ಸಿಬಿಐ, ಏಜೆನ್ಸಿಗಳು “ಸ್ಪಂದಿಸುವುದಿಲ್ಲ”: ಮುಖ್ಯ ನ್ಯಾಯಮೂರ್ತಿ

ನ್ಯಾಯಾಧೀಶರು ಬೆದರಿಕೆಗಳ ಬಗ್ಗೆ ದೂರು ನೀಡಿದಾಗ ತನಿಖಾ ಸಂಸ್ಥೆಗಳು ಸ್ಪಂದಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

ಕಳೆದ ವಾರ ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರ ಹತ್ಯೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ.

ಈ ವೇಳೆ ತನಿಖಾ ಸಂಸ್ಥೆಗಳ ಬಗ್ಗೆ ತೀಕ್ಷ್ಣವಾಗಿ ಮಾತನಾಡಿರುವ ಮುಖ್ಯ ನ್ಯಾಯಮೂರ್ತಿ ರಮಣ ಅವರು, ನ್ಯಾಯಾಧೀಶರು ದೂರು ನೀಡಿದಾಗ ಅವರು “ಯಾವುದೇ ಸಹಾಯ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

“ಸಿಬಿಐ ತನ್ನ ಧೋರಣೆಯನ್ನು ಬದಲಿಸಿಲ್ಲ. ನ್ಯಾಯಾಧೀಶರು ತಮಗೆ ಬರುವ ಬೆದರಿಕೆಗಳ ಬಗ್ಗೆ ಸಿಬಿಐ, ಇಂಟೆಲಿಜೆನ್ಸ್ ಬ್ಯೂರೋಗೆ ದೂರು ನೀಡಿದಾಗ ಅವರು ಪ್ರತಿಕ್ರಿಯಿಸುವುದಿಲ್ಲ. ತನಿಖಾ ಸಂಸ್ಥೆಗಳು ಯಾವುದೇ ಸಹಾಯ ಮಾಡುವುದಿಲ್ಲ ಮತ್ತು ನಾನು ಸ್ವಲ್ಪ ಜವಾಬ್ದಾರಿಯುತವಾಗಿ ಈ ಹೇಳಿಕೆಯನ್ನು ನೀಡುತ್ತಿದ್ದೇನೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.

Read Also: ಅಣ್ಣಾಮಲೈ ಹಾದಿಯಲ್ಲಿ ಮತ್ತೊಬ್ಬ IPS; ಬಿಜೆಪಿ ನಾಯಕರನ್ನು ಭೇಟಿಯಾದ ರವಿ ಚನ್ನಣ್ಣನವರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights