ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಚುನಾವಣೆಯಲ್ಲಿ ಮತದಾರರ ಮನಸೆಳೆಯರು ಎನ್‌ಡಿಎ ಮತ್ತು ಮಹಾಘಟಬಂಧನ್‌ ಮೂಲಕ ಮೈತ್ರಿ ಮಾಡಿಕೊಂಡು ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ನಡುವೆ ಬಿಹಾರದ ಬಹಾದುರಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯೊಬ್ಬರು ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿ ಜನರ ಗಮನ ಸೆಳೆದಿದ್ದಾರೆ.

ದರ್ಭಾಂಗ ಜಿಲ್ಲೆಯ ಬಹಾದುರಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾಚಾರಿ ಮಂಡಲ್ ಎಂಬುವವರು​ ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭ್ಯರ್ಥಿ ನಾಚಾರಿ ಮಂಡಲ್‌, ನಾನು ಬಡವ ನನ್ನಲ್ಲಿ ವಾಹನವಿಲ್ಲ. ಹೀಗಾಗಿ ಎಮ್ಮೆ ಹತ್ತಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಕ್ಷೇತ್ರದ ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನ ಮಾಡದೇ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಮತದಾರರು ಈ ಬಾರಿ ನನ್ನ ಮೇಲೆ ಕೃಪೆ ತೋರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ರಚಾರದ ವೇಳೆ ನಾನು ನೀಡಿರುವ ಎಲ್ಲ ಭರವಸೆಗಳನ್ನ ಪೂರ್ತಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಮೂರು ಸುತ್ತುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್​ 28, ನವೆಂಬರ್​ 3 ಹಾಗೂ 7ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿ: ಬಿಹಾರ: ಬಿಜೆಪಿಯನ್ನು ಟ್ರೋಲ್‌ ಮಾಡುತ್ತಿವೆ ಈ ಹಾಡುಗಳು: ಹಾಡುಗಳನ್ನು ನೋಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights