By election : ಮರುಮೈತ್ರಿ ಮಾತಿನಿಂದ ಬಿಜೆಪಿಯತ್ತ ವಾಲಿದ ಮತದಾರ…

ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದನ್ನು ತಪ್ಪಿಸುವ ಉದ್ದೇಶದಿಮದ ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರು ತೇಲಿಬಿಟ್ಟ ಮರುಮೈತ್ರಿ ಮಾತು ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದಂತಿದೆ.

ಉಪ ಚುನಾವಣೆ ಘೋಷಣೆ ನಂತರ ಹಾವು ಮುಂಗುಸಿಗಳಂತೆ ಕಚ್ಚಾಡಿದ್ದ ಕೈ ದಳ ನಾಯಕರು ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಮತ್ತೆ ಮೈತ್ರಿ ಮಾಡಿಕೊಳ್ಳುವ ಮಾತುಗಳಿಗೆ ಶರಣಾಗಿದ್ದು ಮತದಾರರಲ್ಲಿ ಅನಗತ್ಯ ಗೊಂದಲ ಮೂಡಿಸಿತು ಎಂದು ಹಲವಾರು ಮುಖಂಡರು ಹೇಳುತ್ತಿದ್ದಾರೆ.

ಮೈತ್ರಿ ಮಾಡಿಕೊಂಡರೂ ಬಹುಮತದ ಖಾತರಿ ಇಲ್ಲದೇ ಮತ್ತೆ ಚುಣಾವಣೆ ಬರಬಹುದು ಎಂಯ ಅನುಮಾನವೇ ಮತದಾರರನ್ನು ಸಾರಾಸಗಟಾಗಿ ಬಿಜೆಪಿಯತ್ತ ತಳ್ಳಿತು ಎಂದು ಕಾಂಗ್ರೆಸ್‌ನ ಮೂಲಗಳು ಸೋಲಿಗೆ ಕಾರಣವನ್ನು ನೀಡುತ್ತಿವೆ.

ಕೈ ದಳ ನಾಯಕರ ಮರು ಮೈತ್ರಿ ಮಾತಿನಿಂದ ಎರಡೂ ಪಕ್ಷಗಳ ಕಾರ್‍ಯಕರ್ತರಲ್ಲಿಯೂ ಗೊಂದಲ ಮೂಡಿಸಿತು. ಕಳೆದ ವರ್ಷ ಅಧಿಕಾರಕ್ಕಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದವಾದರೂ ಕಾರ್‍ಯಕರ್ತರ ಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಅಸಾಧ್ಯ ಎಂಬಂತಹ ವಾತಾವರಣವೇ ಇತ್ತು.

ಹೀಗಿರುವಾಗ ಮತ್ತೆ ಮೈತ್ರಿಯ ಯೋಚನೆಯೇ ಕಾರ್‍ಯಕರ್ತರ ಉತ್ಸಾಹಕ್ಕೆ ತಣ್ಣೀರೆರಚಿತು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮರು ಮೈತ್ರಿ ಬಗ್ಗೆ ಮಾತನಾಡುವುದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರೂ ಹಿರಿಯ ನಾಯಕರು ಅವರ ಮಾತಿಗೆ ಬೆಲೆ ಕೊಡದಿದ್ದುದು ಈ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights