Karnataka Budget: ಬಜೆಟ್‌ ಮೊತ್ತ 2.5 ಲಕ್ಷ ಕೋಟಿ; ರಾಜ್ಯದ ಸಾಲ 03 ಲಕ್ಷ ಕೋಟಿ!

2021-22ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಯಡಿಯೂರಪ್ಪ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಆದರೆ, ಇಂಧನ ಬೆಲೆ ಸೇರಿದಂತೆ ನಾನಾ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್‌ ಸಭಾತ್ಯಾಗ ಮಾಡಿ ವಿರೋಧ ವ್ಯಕ್ತಪಸಿದೆ.

ರಾಜ್ಯವು ಈಗಾಗಲೆ ಮೂರು ಲಕ್ಷ ಕೋಟಿ ಸಾಲದಲ್ಲಿದ್ದು, ಜೊತೆಗೆ ಕೇಂದ್ರದಿಂದ ಸಿಗಬೇಕಾಗಿದ್ದ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ಕೊರೊನಾದಿಂದಾಗಿ ಉಂಟಾದ ಆರ್ಥಿಕ ಕುಸಿತದ ಒತ್ತಡವು ರಾಜ್ಯದ ಮೇಲೆ ಇದೆ. ಬಜೆಟ್ ಮಂಡನೆಯು ಪೂರ್ಣಗೊಂಡ ಬಳಿಕ ಉಭಯ ಸದನಗಳಲ್ಲಿ ಏಪ್ರಿಲ್ 1 ರವರೆಗೂ ಬಜೆಟ್ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ.

ಕೊರೊನಾ ನಿಯಂತ್ರಣ, ಲಸಿಕೆ ಹಂಚಿಕೆಯಲ್ಲಿ ರಾಜ್ಯದ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದ ಪಾತ್ರಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ ಎಂದು ಬಜೆಟ್ ಮಂಡನೆಯ ಸಮಯದಲ್ಲಿ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಸಾಂಕ್ರಾಮಿಕವನ್ನು ಎದುರಿಸಲು ರಾಜ್ಯದಾದ್ಯಂತ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದ್ದು, ಕೊರೊನಾ ದುಃಸ್ವಪ್ನ, ಜೀವನವಿಡೀ ನೆನಪಿಸಿಕೊಳ್ಳುವಂತದ್ದಾಗಿದ್ದು, ಈ ಸಮರದಲ್ಲಿ ಮಾನವಕುಲ ಜಯಿಸಿದೆ. ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಲು ನಮ್ಮ ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಜಜೆಟ್-2021 ಮುಖ್ಯಾಂಶಗಳು:

ಈ ಬಾರಿ ರಾಜ್ಯದ ಒಟ್ಟು ಬಜೆಟ್ 2.5 ಲಕ್ಷ ಕೋಟಿಯಾಗಿದೆ. ರಾಜ್ಯದಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು. ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ವನಿತಾ ಸಂಗಾತಿ ಬಸ್ ಪಾಸ್ ವ್ಯವಸ್ಥೆ. ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೆ 4% ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

  • ಪೆಟ್ರೋಲ್- ಡೀಸೆಲ್ ಮೇಲೆ ಯಾವುದೆ ಹೊಸ ತೆರಿಗೆ ಇಲ್ಲ, ಜೊತೆಗೆ ತೆರಿಗೆಯ ಇಳಿಕೆಯು ಇಲ್ಲ.
  • ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.
  • 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೆಷ್ಮೆ ಮಾರುಕಟ್ಟೆ ನಿರ್ಮಿಸಲಾಗುವುದು.
  • 100 ತಾಲೂಕು ಆಸ್ಪತ್ರೆಗಳಲ್ಲಿ 6 ಹಾಸಿಗೆಯ ಐಸಿಯು ನಿರ್ಮಾಣ
  • ಮಹಿಳಾ ಸ್ವ ಸಹಾಯ ಸಂಘ ಉತ್ಪನ್ನಗಳಿಗೆ ಮಾರುಕಟ್ಟೆ
  • ವೀರಶೈವ ಲಿಂಗಾಯತರಿಗೆ 500 ಕೋಟಿ ರೂ.
  • ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ 2.5 ಕೋಟಿ ರೂ.
  • ಮಹಿಳೆಯರ ಕಲ್ಯಾಣಕ್ಕಾಗಿ 37188 ಕೋಟಿ ರೂ.
  • ಮಹಿಳೆಯರಿಗೆ ಆರು ತಿಂಗಳು ಹೇರಿಗೆ ರಜೆ ಮತ್ತು ಆರು ತಿಂಗಳು ಮಕ್ಕಳ ಆರೈಕೆಯ ರಜೆ
  • ಮೈಸೂರಿನಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆಗೆ ನಿರ್ಮಾಣಕ್ಕೆ 10 ಕೋಟಿ ರೂ.
  • ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ 10ರಷ್ಟು ಮೀಸಲಾತಿ
  • ಬ್ಬರ ವಿತರಣೆಗೆ 10 ಕೋಟಿ ರೂ. ಅನುದಾನ
  • ಪ್ರತಿಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣ
  • ಕಿರು ಆಹಾರ ಸಂಸ್ಕರಣೆಗೆ ಉದ್ಯಮಕ್ಕೆ 50 ಕೋಟಿ
  • 6 ಕೋಟಿ ರೂ. ವೆಚ್ಚದಲ್ಲಿ ಮೌಲ್ಯ ವರ್ಧನಾ ಕೇಂದ್ರಗಳ ಸ್ಥಾಪನೆ
  • ಪ್ರಧಾನ ಮಂತ್ರಿ ಮತ್ಸ್ಯ ಸಂಪ್ರದಾ ಯೋಜನೆಗೆ 62 ಕೋಟಿ ರೂ.
  • ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ
  • ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ
  • ಉತ್ತಪ ಪ್ರದೇಶದ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ
  • ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ.
  • ಬೀಚ್‌ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
  • ಮಾಶಾಸನ ಮನೆ ಬಾಗಿಲಿಗೆ ಅಭಿಯಾನ.
  • ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ.
  • ಭೂಕಂದಾಯ ಅಧಿನಿಯಮಕ್ಕೆ ತಿದ್ದುಪಡಿ.
  • ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ.
  • ಸ್ಮಾರ್ಟ್ ಕ್ಲಾಸ್ ರೂಮುಗಳಿಗಾಗಿ 50 ಕೋಟಿ ರೂ
  • ರಾಜ್ಯದಾದ್ಯಂತ 100 ಕಿತ್ತೂರು ರಾಣಿ ಶಿಶುಪಾಲನಾ ಕೇಂದ್ರದ ಸ್ಥಾಪನೆ
  • 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ
  • ಕೃಷಿ ಸಂಚಯ್ ಯೋಜನೆಗೆ 835 ಕೋಟಿ.
  • ಸಾವಯವ ಕೃಷಿಗೆ ಉತ್ತೇಜನಕ್ಕೆ 300 ಕೋಟಿ.
  • ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ.
  • ಎಸ್ ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ರೂ.
  • ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ.
  • ಶಾಲಾ ಕಾಲೇಜುಗಳ ಶೌಚಾಲಯ ಅಭಿವೃದ್ಧಿಗೆ 100 ಕೋಟಿ.
  • ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂ. ಮೀಸಲು. ಕ್ರಿಶ್ಚಿಯನ್‌ ಸಮುದಾಯದ ಅಭಿವೃದ್ಧಿಗೆ 200ಕೋಟಿ ರೂ. ಜೈನ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ 50ಕೋಟಿ ರೂ.
  • ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2ಕೋಟಿ ರೂ.
  • ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳ ಸ್ಮೃತಿ ವನ ಸ್ಥಾಪಿಸಲು 2 ಕೋಟಿ.
  • ಮಹದಾಯಿ ಯೋಜನೆಗೆ 1677ಕೋಟಿ ರೂ.
  • ಉಪ್ಪಿನಕಾಯಿ ಮಾರುವ ಮಹಿಳೆಯರಿಗೆ 25 ಸಾವಿರ ರೂ. ಸಹಾಯಧನ
  • ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ
  • ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ.
  • ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯವುಳ್ಳ ಮತ್ತು 10 ತಾಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯವುಳ್ಳ ಐಸಿಯು ಸೌಲಭ್ಯಕ್ಕೆ 60 ಕೋಟಿ ರೂ.

ಇದನ್ನೂ ಓದಿ: 2021-2022 ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಗಿಫ್ಟ್…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights