BSY ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ : ಫೆ.6ಕ್ಕೆ ಗೆದ್ದ ‘ಅರ್ಹ’ರಿಗೆ ಮಂತ್ರಿಗಿರಿ…

ಬೆಂಗಳೂರು: ಬಹುಚರ್ಚಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತಿಮವಾಗಿ ಮುಹೂರ್ತ ನಿಗದಿಯಾಗಿದ್ದು ಇದೇ ಆರರಂದು ಗುರುವಾರ ನೆರವೇರಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಭಾನುವಾರ ಈ ವಿಷಯ ತಿಳಿಸಿದ್ದಾರೆ.


ದಿಲ್ಲಿಯಿಂದ ಬಂದ ಬಳಿಕ ಶನಿವಾರವಿಡೀ ಸಮಾಲೋಚನೆ ಮಾಡಿದ ಸಿಎಂ ಸಂಪುಟ ವಿಸ್ತರಣೆಯ ರೂಪುರೇಷೆ ಸಿದ್ಧಪಡಿಸಿದ್ದು ಅದರಂತೆ 10 ಮಂದಿ ಅರ್ಹರು ಹಾಗೂ 3 ಮಂದಿ ಮೂಲ ಬಿಜೆಪಿಗರಿಗೆ ಮಂತ್ರಿಭಾಗ್ಯ ಒಲಿದುಬರಲಿದೆ.

ಇನ್ನು ಉಪಚುನಾವಣೆ ಗೆದ್ದ 11 ಮಂದಿ ಮಾಜಿ ಅನರ್ಹರ ಪೀಕಿ ಅಥಣಿಯ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಅವರ ಹೊರತಾಗಿ ಉಳಿದೆಲ್ಲ ಪಕ್ಷಾಂತರಿಗಳ ಮಹದಾಸೆಯೂ ಈಡೇರಲಿದೆ. ಇನ್ನು ಚುನಾವಣೆಯಲ್ಲಿ ಸೋತವರನ್ನು ಸಂಪುಟದ ಹತ್ತಿರಕ್ಕೂ ಬಿಟ್ಟುಕೊಳ್ಳದಿರಲು ಸಿಎಂ ನಿರ್ಧರಿಸಿದ್ದಾರೆ.

ಇನ್ನು ಮೂಲ ಬಿಜೆಪಿಗರ ಪೈಕಿ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಮಂತ್ರಿ ಮಂಡಲ ಸೇರಿಕೊಳ್ಳುವುದು ಖಚಿತವಾದರೆ ಉಳಿದೊಂದು ಸ್ಥಾನಕ್ಕೆ ಹಾಲಪ್ಪ ಆಚಾರ್‍ ಮತ್ತು ಸಿಪಿ ಯೋಗೇಶ್ವರ ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights