Bridge Testing Machine ಬಳಸಿ ಕುಸಿಯುವ ಹಂತದಲ್ಲಿರುವ ಸೇತುವೆ ಸಾಮರ್ಥ್ಯದ ಬಗ್ಗೆ ಟೆಸ್ಟಿಂಗ್…!

ಕಾಫಿನಾಡಿನ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ಜೀವಾಳವಾಗಿರೋ ಬ್ರಿಟಿಷರು ನಿರ್ಮಿಸಿದ್ದ ಸೇತುವೆ ಬಿರುಕು ಬಿಟ್ಟಿದ್ರಿಂದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಿನ್ನೆ ಬೆಳಗ್ಗೆ 10.30 ರಿಂದ 1.30ರವರೆಗೆ ಈ ಮಾರ್ಗದಲ್ಲಿ ಸಂಚರಿಸೋ ಎಲ್ಲಾ ವಾಹನಗಳನ್ನ ನಿಷೇಧಿಸಿ ಸುಮಾರು ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ.

ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಭೆ ಹಾಗೂ ಕಳಸದ ಕಳಸೇಶ್ವರ ದೇವಾಲಯಕ್ಕೆ ಹೋಗಬೇಕೆಂದ್ರು ಇದೇ ಮಾರ್ಗದಲ್ಲಿ ಸಂಚರಿಸಬೇಕಿತ್ತು. ಆದ್ರೆ, ಈ ಬಾರಿಯ ಭಾರೀ ಮಳೆಯಿಂದ ಸೇತುವೆ ಬಿರುಕು ಬಿಟ್ಟಿದ್ರಿಂದ ಪ್ರಯಾಣಿಕರಲ್ಲಿ ಹಾಗೂ ಸ್ಥಳಿಯರಲ್ಲಿ ಆತಂಕ ಹೆಚ್ಚಿತ್ತು. ಹಾಗಾಗಿ ಇಂದು ಅಧಿಕಾರಿಗಳು ಸೇತುವೆಯ ಸ್ಥಿತಿಗತಿಯನ್ನ ಪರಿಕ್ಷೀಸಿದ್ದಾರೆ. ಸೇತುವೆ ಇನ್ನೂ ಗಟ್ಟಿ ಇದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿರೋ ಅಧಿಕಾರಿಗಳು ಸಂಪೂರ್ಣ ವರದಿಯನ್ನ ಇನ್ನ ಎರಡ್ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದಿದ್ದಾರೆ.

ಈ ಸೇತುವೆ ಸುಮಾರು 100 ವರ್ಷದಷ್ಟು ಹೆಳೇಯದ್ದಾಗಿದ್ದು, ಬ್ರಿಟಿಷರು ನಿರ್ಮಿಸಿದ್ದ ಸೇತುವೆಯಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ಸೇರಿದಂತೆ ಅನ್ನಪೂರ್ಣೇಶ್ವರಿ, ಶಾರದಾಂಭೆ ಹಾಗೂ ಕಳಸೇಶ್ವರ ದೇವಾಲಯಕ್ಕೂ 60-70 ಕಿ.ಮೀ. ಸುತ್ತಿ ಬಳಸಿ ಓಡಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights