ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಬ್ರೇಕ್ : ರಾಜ್ಯದಲ್ಲಿ 5 ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್..

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದ್ದು ಇಂದು ಬೆಂಗಳೂರಿ ಸೇರಿದಂತೆ 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿದೆ.

ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ, ಬೆಂಗಳೂರಿನಲ್ಲಿ ಲಸಿಕೆ ಹಾಕಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ. ಬೆಂಗಳೂರಿನ ವಿದ್ಯಾಪೀಠ, ಕಾಮಾಕ್ಷಿಪಾಳ್ಯ, ಯಲಹಂಕ, ಹಾರಗದ್ದೆ ಕೇಂದ್ರದಲ್ಲಿ ವಯಾಕ್ಸಿನ್ ಡೆಮೋ ಕೊಡಲಾಗುತ್ತಿದೆ. ಒಂದೊಂದು ಕೇಂದ್ರದಲ್ಲಿ 25 ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

ಲಸಿಕೆ ನೀಡಿದ ಬಳಿಕ ವೀಕ್ಷಣೆಗೆ ಒಳಪಡಿಸಲಾಗುತ್ತದೆ. ವಾಕ್ಸಿನ್ ಪಡೆದವರಲ್ಲಿ ಕಾಣಿಸುವ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ. ಇದರ ಮೂಲಕ ಮೊದಲ ಹಂದಲ್ಲಿ ಕೊರೊನಾ ವಾರಿಯರ್ಸ್, ನರ್ಸ್, ಡಾಕ್ಟರ್ಸ್ ಹೀಗೆ ಆಯ್ದ ಕೆಲವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇದಕ್ಕೆ ಬೇಕಾದ ಸಿದ್ದತೆಗಳು ಲಸಿಕಾ ವಿತರಣಾ ಕೇಂದ್ರದಲ್ಲಿ ನಡೆದಿದೆ.

5 ಜಿಲ್ಲೆಗಳಲ್ಲಿ ಒಟ್ಟು 16 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಹೇಗೆ ಕೊಡಬೇಕು? ಲಸಿಕೆ ಹಾಕುವ ಮುನ್ನ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು? ಎನ್ನುವ ವಿಚಾರಗಳನ್ನು ತಿಳಿದುಕೊಳ್ಳಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights